ಕಾಸರಗೋಡು, ಅ 03 (DaijiworldNews/MS): ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಬದಿಯಡ್ಕ ಠಾಣಾ ಪೊಲೀಸರು ,16 ಮಂದಿಯನ್ನು ಬಂಧಿಸಿದ್ದು, 78,030 ರೂ . ವನ್ನು ವಶಪಡಿಸಿ ಕೊಂಡಿದ್ದಾರೆ.
ಮಾನ್ಯ ಉಳ್ಳೋಡಿಯ ಕಾಡೊಂದರಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಸೋಮವಾರ ಮುಂಜಾನೆ ಪೊಲೀಸರು ದಾಳಿ ನಡೆಸಿದ್ದಾರೆ.
ಮಾನ್ಯದ ವಿಜಯ, ಕಲ್ಲಕಟ್ಟದ ರಮೇಶ್, , ಕೊಡೊಂಬೆಳ್ಳೂರಿನ ಜಾನ್ಸನ್, ಕಲ್ಲಾರ್ ನ ಜೋಸ್, ಕೊಲ್ಲಂಗಾನದ ಕರುಣಾಕರ, ಕುಂಬಳೆ ಯ ಅಬೂಬಕರ್ ಸಿದ್ದಿಕ್, ಮಾನ್ಯ ದ ಅಬ್ಬಾಸ್,ಬದಿಯಡ್ಕದ ಹಾರಿಸ್, ಏ ಣಿಯೆರ್ಪು ವಿ ನ ಸುರೇಶ್, ಮುರಳಿ ಕೊಲ್ಲಂಗಾನ, ಅಡ್ವಳ ನಿವಾಸಿ ವಿಠಲ, ಅಂಬಲತ್ತರ ದ ನಿ ಶಾದ್, ಕಾಸರಗೋಡು ನಿವಾಸಿ ಅಶೋಕ್ ಕುಮಾರ್, ಮೊಗ್ರಾ ಲ್ ಪುತ್ತೂರು ನಿವಾಸಿ ಅಬ್ದುಲ್ ರಹಮಾನ್, ಕಳ್ಳಾರು ನಿವಾಸಿ ವಿನೋದ್ ಬಂಧಿತರು.