ಕಾರ್ಕಳ, ಅ 03 (DaijiworldNews/MS): ಕರ್ನಾಟಕ ಶಿಲ್ಪಕಲಾ ಅಕಾಡೆಮಿ 2022ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿಗೆ ಕಾರ್ಕಳದ ಹಿರಿಯಂಗಡಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಬಳಿಯಿರುವ ಶಿಲ್ಪ ಗ್ರಾಮದ ಶಿಲ್ಪಿ ಕೆ. ಸತೀಶ್ ಆಚಾರ್ಯ ಆಯ್ಕೆಯಾಗಿದ್ದಾರೆ.
ಜಕಣಾಕಾರಿ ಪ್ರಶಸ್ತಿ ವಿಜೇತ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ಶಿಲ್ಪ ಗುರು ಕೆ. ಶ್ಯಾಮರಾಯ ಆಚಾರ್ಯ ಹಾಗೂ ಸುಮಿತ್ರ ಕೆ.ಎಸ್ ದಂಪತಿಯ ಪುತ್ರರಾಗಿರುವ ಇವರು 1964ರಲ್ಲಿ ಜನಿಸಿದರು.
ತಂದೆಯಿಂದ ಶಿಲ್ಪಕಲೆಯನ್ನು ಕಲಿತಿರುವ ಅವರು ನಿರ್ಮಿಸಿದ ಮೂರ್ತಿಗಳು,ಶಿಲ್ಪಗಳು, ಸ್ತಂಭಗಳು ರಾಜ್ಯ ಹಾಗೂ ಹೊರ ರಾಜ್ಯಗಳ ದೇವಸ್ಥಾನಗಳಿಗೆ ಬಳಕೆಯಾಗಿವೆ. 2007 ರಲ್ಲಿ ಕಾರ್ಕಳದಲ್ಲಿ ಆರಂಭಗೊಂಡ ಶಿಲ್ಪ ಗ್ರಾಮದಲ್ಲಿ ಮೂರ್ತಿ ಶಿಲ್ಪಿ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.