ಬಂಟ್ವಾಳ: ಅ 03 (DaijiworldNews/MS): ನೇರಳಕಟ್ಟೆ ಪ್ರೀಢಂ ಕಮ್ಯೂನಿಟಿ ಹಾಲ್ ನಲ್ಲಿ ಕೇರಳದ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತರಬೇತಿ ನೀಡಿದ್ದರು ಎನ್ನುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ವಿಚಾರವಾಗಿ ಎಲ್ಲೆಡೆ ಗೊಂದಲವಾಗಿತ್ತು.
ವಾಸ್ತವವಾಗಿ ಕೇರಳ ಮೂಲದ ಸಹಾಯಕ ಉಪ ನೀರೀಕ್ಷಕ ಕೆಲಸ ತ್ಯಜಿಸಿದ ಬಳಿಕ ಗುಂಪು ಘರ್ಷಣೆಯ ಸಂದರ್ಭದಲ್ಲಿ ನಾಯಕರ ರಕ್ಷಣೆ ಹೇಗೆ ಮಾಡಬೇಕೆಂದು ತಂಡಗಳಿಗೆ ತರಬೇತಿ ನೀಡಿದ್ದಾರೆ ಎನ್ನಲಾಗಿದೆ.
ಮಿತ್ತೂರಿನ ಫ್ರೀಡಂ ಹಾಲ್ ಗೆ ಇತ್ತೀಚೆಗೆ ದಾಳಿ ನಡೆಸಿದ್ದ ಅಧಿಕಾರಿಗಳು ಹಲವು ಮಹತ್ವದ ಮಾಹಿತಿ ಕಲೆ ಹಾಕಿದ್ದರು. ಹಲವು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದರು. ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿ ತನಿಖೆ ತೀವ್ರಗೊಳಿಸಿದ್ದರು
ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರು ಕೂಡ ಇಲ್ಲೇ ತರಬೇತಿ ಪಡೆದಿದ್ದು, ಈ ಬಗ್ಗೆ ಎನ್ಐಎ ಹಾಲ್ಗೆ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿದೆ. ದಾಳಿ ಮಾಡಿ ಟ್ರಸ್ಟಿ ಅಯ್ಯುಬ್ ಅಗ್ನಾಡಿ ಬಂಧಿಸಿರೊ ಎನ್ಐಎ ತಂಡ ಮತ್ತಿಬ್ಬರು ಟ್ರಸ್ಟಿಗಳಿಗಾಗಿ ಬಲೆ ಬೀಸಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕೃತ ಆದೇಶದ ಪ್ರಕಾರ ಪ್ರೀಡಂ ಕಮ್ಯುನಿಟಿ ಹಾಲ್ ಸೀಜ್ ಮಾಡಲಾಗಿದೆ.