ಪುತ್ತೂರು, ಅ 01 (DaijiworldNews/HR): ರೈತಸಂಘ, ಹಸಿರುಸೇನೆಯಿಂದ ಅಡಿಕೆ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಪುತ್ತೂರು ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಿತು.
ಈ ಬಾರಿಯ ಅತಿಯಾದ ಮಳೆಗೆ ಸುಮಾರು 64 ಶೇಕಡ ಅಡಿಕೆ ಬೆಳೆ ಹಾನಿಯಾಗಿದ್ದು, ಸರಕಾರ ಕೃಷಿ ಹಾನಿಗೆ 300 ಕೋಟಿ ಈಗಾಗಲೇ ಬಿಡುಗಡೆ ಮಾಡಿದೆ. ಇದರಲ್ಲಿ ಅಡಿಕೆ ಬೆಳೆಯ ಪಾಲನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ರೈತಸಂಘ ಆಗ್ರಹಿಸಿದೆ.
ಇನ್ನು ಕೇಂದ್ರ ಸರಕಾರ ರದ್ದು ಮಾಡಿದ ಕೃಷಿ ಕಾನೂನು ರಾಜ್ಯದಲ್ಲಿ ಈಗಲೂ ಜಾರಿಯಲ್ಲಿದ್ದು, ಸರಕಾರ ಕೂಡಲೇ ಈ ಕಾನೂನನ್ನು ರದ್ದುಪಡಿಸಬೇಕು. ಇಲ್ಲದೇ ಹೋದಲ್ಲಿ ರಾಜ್ಯದೆಲ್ಲೆಡೆ ರೈತಸಂಘ ಪ್ರತಿಭಟನೆ ನಡೆಯಲಿದೆ ಎಂದು ರೈತಸಂಘ ಎಚ್ಚರಿಕೆ ನೀಡಿದೆ.