ಉಡುಪಿ, ಅ 01 (DaijiworldNews/MS): ಜಿಲ್ಲೆಯ ಕಾಪು ತಾಲೂಕಿನ ಮೂಳೂರು ಕಡಲ ತೀರದಲ್ಲಿ ಬಲೆ ಬೀಸಿದ ಮೀನುಗಾರರು ಬಲೆಗೆ ಬಿದ್ದ ಮೀನು ಕಂಡು ಹಿರಿ ಹಿರಿ ಹಿಗ್ಗಿದ್ದಾರೆ.
ದೊಡ್ದ ದೊಡ್ಡ ಗಾತ್ರದ ನೂರಾರು ತೊರಕೆ ಮೀನುಗಳು ಮೀನುಗಾರರ ಬಲೆಗೆ ಬಿದ್ದು ಮೀನುಗಾರರಿಗೆ ಸುಗ್ಗಿಯಂತಾಗಿದೆ. ಬಲೆಗೆ ಬಿದ್ದ 50 ಕೆಜೆ ಯಷ್ಟು ತೂಕದ ನೂರಾರು ತೊರಕೆ ಮೀನುಗಳನ್ನು ನೋಡಲು ಸೇರಿದ ನೂರಾರು ಮಂದಿ ಸೇರಿದ್ದಾರೆ.
ಅಧಿಕ ತೂಕದ ಮೀನುಗಳನ್ನು ದೊಡ್ಡ ಬಡಿಗೆಯಲ್ಲಿ ಕಟ್ಟಿ ಮೀನುಗಾರರು ಮೇಲೆ ಸಾಗಿಸಿದ್ದಾರೆ. ಈ ಮೀನುಗಳಿಗೆ ಕೆಜಿಗೆ 250 ರಿಂದ 300 ರೂಪಾಯಿದ್ದು ಬಹಳಷ್ಟು ಬೇಡಿಕೆ ಇದೆ.ಇತ್ತೀಚಿನ ಕಡಲಿನಲ್ಲಿ ಹೇರಳವಾಗಿ ವಿವಿಧ ಮೀನುಗಳು ಸಿಗುತ್ತಿದ್ದು ಮೀನುಗಾರರಿಗೆ ಸಂತಸ ತಂದಿದೆ.