ಮಂಗಳೂರು, ಅ 01 (DaijiworldNews/MS): ವಿಟ್ಲ ಮಂಗಳಪದವು ಬೆಂಜತಿಮಾರುಗುತ್ತು ನಿವಾಸಿಯಾದ, ಶ್ರೀಮತಿ ರಂಜಿತಾ ರವರು ಮಂಡಿಸಿದ "ನ್ಯಾನೊಸ್ಟ್ರಕ್ಚರ್ಡ ಕೋಬಾಲ್ಟ್ ಆಂಡ್ ನಿಕೆಲ್ ಆಕ್ಸೈಡ್ಸ್: ಸಿಂಥೆಸಿಸ್ ಆಂಡ್ ಇಫೆಕ್ಟ್ ಆಫ್ ಡೋಪಿಂಗ್ " ಎಂಬ ಸಂಶೋಧನಾ ಮಹಾಪ್ರಬಂಧ ಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ ಎಚ್. ಡಿ ಪದವಿ ಪ್ರದಾನ ಮಾಡಿರುತ್ತದೆ.
ಇವರಿಗೆ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಡಾ| ಆರತಿ ಎಸ್ ಭಟ್ ರವರು ಮಾರ್ಗದರ್ಶನ ಮಾಡಿರುವರು. ಪ್ರಸ್ತುತ ಇವರು ಸಂತ ಅಲೋಶಿಯಸ್ ಕಾಲೇಜಿನ ರಸಾಯನಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು ಉಡುಪಿ ಹೆರ್ಗ ಶ್ರೀ ರಘುರಾಮ ಶೆಟ್ಟಿ ಹಾಗೂ ಶ್ರೀಮತಿ ಸುಭಾಷಿಣಿ ರವರ ಪುತ್ರಿ ಹಾಗೂ ಶ್ರೀ ತುಕಾರಾಮ ರೈ ರವರ ಪತ್ನಿ