ಕಾರ್ಕಳ, ಸೆ.30 (DaijiworldNews/SM): ಭಾರತದಲ್ಲಿ 1.5 ಲಕ್ಷ ಟನ್ ಅಡಿಕೆ ಉತ್ಪಾದನೆ ಯಾಗುತ್ತದೆ. ಭೂತಾನಿನಲ್ಲಿ ಅಡಿಕೆ ಬೆಳೆಯುತ್ತಿರುವುದು ಬರೇ 17 ಸಾವಿರ ಟನ್. ಆ ದೇಶದ ವಿನಂತಿಯ ಮೇರೆಗೆ ಭಾರತ ಅಡಿಕೆಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಇದರಿಂದ ಅಡಿಕೆ ಬೆಳೆಗಾರರ ಮೇಲೆ ಯಾವುದೇ ದುಷ್ಪರಿಣಾಮ ಬೀರದು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಸಮರ್ಥಿಸಿದರು.
ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಜೋಡೋ ಯಾತ್ರೆಯು ಈ ಪ್ರದೇಶಕ್ಕೆ ಅಗತ್ಯ ಇಲ್ಲ. ಭಾರತದ ಗಡಿಭಾಗಗಳಲ್ಲಿ ಅದರ ಯಾತ್ರೆ ಅಗತ್ಯತೆ ಇದೆ. ಯಾಕೆಂದರೆ ಭಾರತದ ವಿಭಜನೆಗೆ ಕಾರಣವಾಗಿರುವುದು ಕಾಂಗ್ರೆಸ್. ಆದುದರಿಂದ ರಾಹುಲ್ ಗಾಂಧಿ ರಾಷ್ಟ್ರದ ಗಡಿಭಾಗಕ್ಕೆ ತೆರಳಿ ಯಾತ್ರೆ ಮುಂದುವರಿಸಲಿ ಎಂದು ಸಲಹೆ ನೀಡಿದರು.
ಎಸ್ಡಿಪಿಐ ಒಂದು ರಾಜಕೀಯ ಪಕ್ಷವಾದುದರಿಂದ ಅದನ್ನು ನಿಷೇದಿಸುವ ಹೊಣೆಗಾರಿಕೆಯು ಚುನಾವಣಾ ಆಯೋಗದ ಮೇಲಿದೆ. ರಾಷ್ಟ್ರದ್ರೋಹ ಕೃತ್ಯಗಳಲ್ಲಿ ಅದರ ಮುಖಂಡರು ಹಾಗೂ ಕಾರ್ಯಕರ್ತರು ಸಕ್ರಿಯಾಗೊಂಡು ಅದರ ಬಗ್ಗೆ ಸಾಕ್ಷ್ಯಧಾರ ದೊರೆತ್ತಲ್ಲಿ ಅದಕ್ಕೂ ನಿಷೇಧ ಬೀಳುವ ದಿನಗಳು ಎದುರಾಗಲಿದೆ ಎಂಬ ಸೂಚನೆಯನ್ನು ನೀಡಿದರು.
ಖಾದಿ ಭಂಡಾರಗಳ ಮುಚ್ಚುಗಡೆಗೆ ಕಾಂಗ್ರೆಸ್ ನೇರ ಹೊಣೆ
ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಸ್ವದೇಶಿ ಚಳುವಳಿಯ ಭಾಗವಾಗಿದ್ದ ಖಾದಿ ಉತ್ಪನ್ನಗಳು ದೇಶದಲ್ಲಿ ಹೆಚ್ಚಿನ ಭೇಡಿಕೆ ಇತ್ತು. ದೇಶ ಸ್ವಾತಂತ್ರ್ಯದ ಬಳಿಕ ಖಾದಿ ಭಂಡಾರುಗಳು ಕಾಂಗ್ರೆಸ್ ಆಡಳಿತದಲ್ಲಿ ಅವುಗಳು ಮಚ್ಚಲ್ಪಟ್ಟವು. ಪರಿಣಾಮವಾಗಿ ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಖಾದಿ ಬಟ್ಟೆಯಿಂದ ತಯಾರಿಸಲು ಅಸಾಧ್ಯವಾಗಿ ಪಾಲಿಸ್ಟರ್ ಬಟ್ಟೆಯನ್ನು ಉಪಯೋಗಿಸಬೇಕಾಯಿತು.
ದೇಶದಲ್ಲಿ ಏಕೈಕ ಖಾದಿ ರಾಷ್ಟ್ರ ಉತ್ಪನ್ನ ಘಟಕವು ಹುಬ್ಬಳ್ಳಿಯ ಬೇಗೇರಿಯಲ್ಲಿ ಇದೆ. ಕರ್ನಾಟಕ ಖಾದಿ ಸಂಯುಕ್ತ ಸಂಘವು ಅದರ ನಿರ್ವಹಣೆ ನಡೆಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಯವರು ಸ್ವದೇಶ ಬಳಕೆಗೆ ಹೆಚ್ಚಿನ ಒತ್ತು ನೀಡಿ ಖಾದಿ ಉತ್ಪನ್ನನಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ರೈತ ಸಮುದಾಯ ನೇಕಾರ ಸಮುದಾಯ ಇದರಿಂದ ಹೆಚ್ಚಿನ ರೀತಿಯಲ್ಲಿ ಪ್ರಯೋಜನ ಪಡೆಯಲಿದ್ದಾರೆ. ಖಾದಿ ಉತ್ಪನ್ನಗಳ ಬಳಕೆ ಮಾತ್ರವಲ್ಲದೇ ರಫ್ತು ಯೋಜನೆಯೂ ಕೇಂದ್ರ ಸರಕಾರದ ಮುಂದಿದೆ.