ಮಂಗಳೂರು,ಸೆ.30 (DaijiworldNews/HR): ಪಿಎಫ್ಐ ಮತ್ತು ಉಗ್ರಚಟುವಟಿಕೆಗೆ ಕುರಿತು ಎನ್ಐಎ ತೀವ್ರ ತನಿಖೆ ನಡೆಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆ ವಿವಿಧ ಕಡೆ ಉಗ್ರಚಟುವಟಿಕೆಗಳಿಗೆ ತರಬೇತಿ ನಡೆಸಲಾಗುತ್ತಿದೆ ಎಂಬ ಮಾಹಿತಿಯ ಆಧಾರದಲ್ಲಿ ದಾಳಿ ಮಾಡಿರುವ ಎನ್ಐಎ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯುನಿಟಿ ಹಾಲ್ ಟ್ರಸ್ಟಿ ಓರ್ವನನ್ನು ಬಂಧಿಸಿದ್ದು ಮತ್ತೊಬ್ಬ ನಾಪತ್ತೆಯಾಗಿದ್ದಾನೆ.
ಬಂಧಿತ ಟ್ರಸ್ಟಿಯನ್ನು ಅಯೂಬ್ ಅಗ್ನಾಡಿ ಎಂದು ಗುರುತಿಸಲಾಗಿದ್ದು, ಮತ್ತೊರ್ವ ಟ್ರಸ್ಟಿ ಮಸೂದ್ ಅಗ್ನಾಡಿ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಬಂಟ್ವಾಳ, ಪುತ್ತೂರು, ಸುಳ್ಯದ ಕೆಲ ಅಜ್ಞಾತ ಪ್ರದೇಶಗಳಲ್ಲಿ ಪಿಎಫ್ಐ ಟೆರರ್ ಟ್ರೈನಿಂಗ್ ಸೆಂಟರ್ ನಡೆಸಲಾಗುತ್ತಿದೆ ಎನ್ನಲಾಗಿದ್ದು, ಬಂಟ್ವಾಳ ತಾಲೂಕಿನ ಮಿತ್ತೂರಿನಲ್ಲಿರೂ ಫ್ರೀಡಂ ಕಮ್ಯುನಿಟಿ ಹಾಲ್ ಕೂಡ ಒಂದಾಗಿದ್ದು, ಇಲ್ಲಿ ಸಾಕಷ್ಟು ಯುವಕರಿಗೆ ಇಲ್ಲಿ ಉಗ್ರ ತರಬೇತಿ ಅನುಮಾನ ವ್ಯಕ್ತವಾಗಿದೆ.
ಟ್ರಸ್ಟ್ ಹೆಸರಿನಲ್ಲಿ 2007ರಲ್ಲಿ ಫ್ರೀಡಂ ಕಮ್ಯುನಿಟಿ ಹಾಲ್ ಆರಂಭವಾಗಿದ್ದು, ಅಂದಿನಿಂದ ಈವರೆಗೂ ಸಾವಿರಾರು ಯುವಕರಿಗೆ ಟ್ರೈನಿಂಗ್ ನೀಡಲಾಗಿದ್ದು, ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರು ಕೂಡ ಇಲ್ಲೇ ತರಬೇತಿ ಆಗಿದ್ದು. ಈ ಬಗ್ಗೆ ಎನ್ಐಎ ಈ ಹಾಲ್ಗೆ ದಾಳಿ ನಡೆಸಿ ಟ್ರಸ್ಟಿ ಓರ್ವನನ್ನು ಬಂಧಿಸಿದ್ದು, ಮತ್ತಿಬ್ಬರು ಟ್ರಸ್ಟಿಗಳು ನಾಪತ್ತೆಯಾಗಿದ್ದಾರೆ.
ಇನ್ನು ಈ ಹಾಲ್ ಅನ್ನು ಸೀಜ್ ಮಾಡಲು ಎನ್ಐಎ ಸೂಚನೆ ನೀಡಿದ್ದು, ಒಂದೆರಡು ದಿನಗಳಲ್ಲಿ ಫ್ರೀಡಂ ಕಮ್ಯುನಿಟಿ ಹಾಲ್ ಸೀಜ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.