ಬ್ರಹ್ಮಾವರ, ಫೆ 12 (MSP): ಸಾರ್ವಜನಿಕರನ್ನು ತಲವಾರು ಹಿಡಿದು ಭಯಭೀತಗೊಳಿಸಲು ಯತ್ನಿಸಿದಾದ, ಇದೀಗ ಪೊಲೀಸರ ವಶವಾಗಿದ್ದಾರೆ. ತಲವಾರು ಜಳಪಿಸುತ್ತಾ ಸ್ಥಳೀಯರಲ್ಲಿ ಭಯಹುಟ್ಟು ಹಾಕುತ್ತಿದ್ದ ಬಗ್ಗೆ ಯುವಕನೋರ್ವನ ಬಗ್ಗೆ ಬ್ರಹ್ಮಾವರ ಠಾಣೆ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಓರ್ವನನ್ನು ವಶಕ್ಕೆ ಪಡೆದ ಘಟನೆ ಸಾಲೀಕೇರಿಯಲ್ಲಿ ನಡೆದಿದೆ.
ಬ್ರಹ್ಮಾವರದ ಸಾಲೀಕೆರೆ ವೀರಭದ್ರ ಮತ್ತು ದುರ್ಗಾಪರಮೇಶ್ವರೀ ದೇವಸ್ಥಾನದ ಸಮೀಪದಲ್ಲಿ ಸನಿಲ್ ಎಂಬ ವ್ಯಕ್ತಿ ಮದ್ಯಪಾನ ಮಾಡಿ, ತಲವಾರು ಬೀಸುತ್ತಾ , ಹೆದರಿಸುತ್ತಾ ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದನು. ಸ್ಥಳೀಯರು ಬ್ರಹ್ಮಾವರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ತಲವಾರು ಝಳಪಿಸುತ್ತಿದ್ದ ಆತನನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿ ಸುನಿಲ್ (26) ಸಿಎಚ್ ಪಿ ಶಾಲೆಯ ಗುಡೆಬೆಟ್ಟು ನಿವಾಸಿಯಾಗಿದ್ದು, ಈ ಹಿಂದೆ ಕೂಡಾ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಗ್ಗೆ ಆತನ ವಿರುದ್ದ ಆರೋಪಿಗಳಿರುವುದು ಬೆಳಕಿಗೆ ಬಂದಿದೆ.