ಕಾರ್ಕಳ, ಸೆ 30 (DaijiworldNews/MS): ಅಪಾಯಕಾರಿ ಹೊಂಡ ತಪ್ಪಿಸಲು ಹೋದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಎರಡೂ ಕಾರುಗಳು ಜಖಂಗೊಂಡ ಘಟನೆ ಕಾರ್ಕಳ ತಾಲೂಕು ಕುಂಟಿಬೈಲು ತಿರುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.ಅಪಘಾತ ರಭಸಕ್ಕೆ ಎರಡೂ ಕಾರುಗಳು ಜಖಂಗೊಂಡಿದೆ.
ಬಜಗೋಳಿಯ ವೈದ್ಯರೊಬ್ಬರಿಗೆ ಸೇರಿದ ಕಾರು ಬಜಗೋಳಿಯಿಂದ ಕಾರ್ಕಳಕ್ಕೆ ಹೊರಟಿದ್ದು,ಕುಂಟಿಬೈಲು ತಿರುವಿನಲ್ಲಿರುವ ಅಪಾಯಕಾರಿಯಾದ ದೊಡ್ಡ ಹೊಂಡವನ್ನು ತಪ್ಪಿಸುವಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅಪಾಯಕಾರಿ ಹೊಂಡದಿಂದಾಗಿ ಸರಣಿ ಅಪಘಾತ:
ಕುಂಟಿಬೈಲಿನಲ್ಲಿರುವ ಈ ತಿರುವಿನಲ್ಲಿ ಅಪಾಯಕಾರಿ ಹೊಂಡವೊಂದಿದ್ದು ಇದೇ ಕಾರಣದಿಂದಾಗಿ ಇಲ್ಲಿ ಸರಣಿ ಅಪಘಾತಗಳಾಗುತ್ತಿದೆ.ಇತ್ತೀಚೆಗೆ ಮಣ್ಣು ತುಂಬಿಸಿ ಹೊಂಡಕ್ಕೆ ಟೇಪೀ ಹಾಕುವ ಕೆಲಸ ಮಾಡಿದ್ದರೂ ಮಳೆಯ ಕಾರಣದಿಂದ ಮಣ್ಣು ಕಿತ್ತು ಹೋಗಿತ್ತು.ಇದೀಗ ಬೃಹತ್ ಹೊಂಡಕ್ಕೆ ಮತ್ತೊಂದು ಅಪಘಾತವಾಗಿದೆ.ಅಪಾಯಕ್ಕೆ ಅಹ್ವಾನ ಕೊಡುವ ಈ ಬೃಹತ್ ಹೊಂಡಕ್ಕೆ ಇನ್ನೆಷ್ಟು ಬಲಿಯಾಗಬೇಕು ಎಂದು ಸ್ಥಳೀಯರು ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.