ಉಜಿರೆ, ಫೆ 12 (MSP): ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟಿ ಹಾಗೂ ಅದರಲ್ಲಿದ್ದ ಏಳು ಮೀನುಗಾರರು ನಾಪತ್ತೆಯಾಗಿ ಎರಡು ತಿಂಗಳು ಸಮೀಪಿಸುತ್ತಿದ್ದರೂ ಇಲ್ಲಿಯ ತನಕ ಯಾವುದೇ ಮಹತ್ವದ ಸುಳಿವು ಲಭ್ಯವಾಗಿಲ್ಲ. ಇದೀಗ ಮತ್ತೊಂದು ಪ್ರಯತ್ನವೆಂಬಂತೆ ಮೀನುಗಾರರ ಪತ್ತೆಗೆ ಭಾರತೀಯ ನೌಕೆಯ ಐಎನ್ಎಸ್ ಸಟ್ಲೆಜ್ (ಜೆ 17) ನೌಕೆ ಪತ್ತೆ ಕಾರ್ಯಾಚರಣೆಗೆ ಇಳಿದಿದೆ.
ಐಎನ್ಎಸ್ ಸಟ್ಲೆಜ್ ನೌಕೆ, ಹೈಡ್ರೋ ಗ್ರಾಫಿಕ್ ಸರ್ವೇ ನೌಕೆಯಾಗಿದ್ದು ಇದರಲ್ಲಿ ತುರ್ತು ಅಗತ್ಯ ಕಾರ್ಯಾಚರಣೆಗೆ ಸಂಬಂಧಪಟ್ಟ ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡಿದೆ. ಇದು ಗಂಟೆಗೆ ಸುಮಾರು 30 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಅಲ್ಲದೆ ಈ ನೌಕೆಯಲ್ಲಿ ಒಂದು ಹೆಲಿಪ್ಯಾಡ್ ನ್ನು ಕೂಡಾ ಒಳಗೊಂಡಿದೆ. ಎಚ್ಡಿ ಫೋಟೊ, ಸಾಗರದಾಳವನ್ನು ಸ್ಕ್ಯಾನ್ ಮಾಡುವ ಸೌಲಭ್ಯವನ್ನು ಒಳಗೊಂಡಿದೆ ಇದಲ್ಲದೆ
ಗ್ರೇವಿ ಮೀಟರ್, ಸಾಗರ ವಿಜ್ಞಾನ ಸಂವೇದಕಗಳು, ನೀರಿನಾಳವನ್ನು ಸ್ಕ್ಯಾನ್ ಮಾಡುವಂತಹ ಸೋನಾರ್ ವ್ಯವಸ್ಥೆ, ಸ್ವಯಂ ಚಾಲಿತ ಡೇಟಾ ಲಾಗಿಂಗ್ ಸೌಲಭ್ಯವನ್ನು ಇದು ಹೊಂದಿದೆ.