ಉಡುಪಿ, ಸೆ 29 (DaijiworldNews/MS): ಸುಮಾರು 25 ವರ್ಷಗಳಿಂದ ಸಂಘಟನೆಯ ಕೆಲಸವನ್ನು ಮಾಡಿ, ಮತ್ತೆ ರಾಜಕೀಯ ಕಾರ್ಯಗಳನ್ನು ಮಾಡುತ್ತಿದ್ದೇನೆ. ಇಂತಹ ಹೇಳಿಕೆಗಳು ಬೆದರಿಕೆಗಳು ಹಲವಾರು ಬಂದಿವೆ. ಇದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಕೆಲಸದಲ್ಲಿ ಕುಂಠಿತ ಆಗಿಲ್ಲ. ವೇಗ ಕಡಿಮೆ ಆಗಿಲ್ಲ. ನನ್ನ ಜವಬ್ದಾರಿ ಕರ್ತವ್ಯವನ್ನು ಈ ಹಿಂದೆ ಯಾವ ರೀತಿ ಮಾಡಿದ್ದೇನೋ ,ಅದೇ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುತ್ತೇನೆ. ಇವರ ಸುಳ್ಳು ಬೆದರಿಸುವ ಹೇಳಿಕೆಗಳಿಂದ ನಾನು ಹಿಂಜರಿಯುವಂತಹ ಪ್ರಶ್ನೆಯೇ ಇಲ್ಲ, ಎಂದು ಬಿಜೆಪಿ ನಾಯಕ ಯಶ್ ಪಾಲ್ ಸುವರ್ಣ ಹೇಳಿದರು.
ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ,"ನರೇಂದ್ರ ಮೋದಿ,ಅಮಿತ್ ಶಾ ಅವರ ಈ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಶೋಭಾ ಕರಂದ್ಲಾಜೆಯವರ ಜೊತೆ ಫೋಟೋ ತೆಗೆದರೆ ಕಾಂಗ್ರೆಸ್ ಪಕ್ಷ 5000 ಘೋಷಣೆ ಮಾಡುವುದಕ್ಕಿಂತ ೫ ಲಕ್ಷ ಹಣವನ್ನು ಬಹುಮಾನವನ್ನಾಗಿ ಈ ಪಿಎಪ್ಐ ಅನ್ನು ಬ್ಯಾನ್ ಮಾಡಿದಕ್ಕಾಗಿ ಘೋಷಣೆ ಮಾಡಿದ್ದರೆ ಅವರ ನಿಜವಾದ ದೇಶಪ್ರೇಮ ತಿಳಿಯುತ್ತಿತ್ತು. ಅವರು ಒಂದು ಕಣ್ಣಲ್ಲಿ ನೆಗೆಯಾಡಿ ಇನ್ನೊಂದು ಕಣ್ಣಲ್ಲಿ ನೀರು ಹರಿಸುತ್ತಾರೆ. 65 ವರ್ಷಗಳ ಅವರ ಆಡಳಿತದಲ್ಲಿ ಅವರಿಗೆ ಯಾವುದೇ ಪರಿಣಾಮಕರಿ ಹೆಜ್ಜೆಯನ್ನಿಡಲು ಆಗಲಿಲ್ಲ. ಇದರಿಂದಾಗಿ ಜನರು ಕಾಂಗ್ರೆಸ್ ಕಾರ್ಯಕರ್ತರನ್ನ ನಂಬದೇ ಅವರ ಹೇಳಿಕೆಗಳನ್ನು ಹಾಸ್ಯಾಸ್ಪದವಾಗಿ ಕಾಣುತ್ತಾರೆ", ಎಂದು ನಿನ್ನೆ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಗೆ ಯಶಪಾಲ್ ತಿರುಗೇಟು ನೀಡಿದರು.
ಎಸ್ಡಿಪಿಐ- ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ಅಧಿಕೃತ ಪಕ್ಷದ ಚಿಹ್ನೆಯನ್ನು ಪಡೆದುಕೊಂಡಿದೆ. ಆದರೆ ಸಿಎಫ್ಐ ,ಪಿಎಫ್ಐ ಕಾನೂನುಬಾಹಿರ ಚಟುವಟಿಕೆಯನ್ನು ಮಾಡುವ ಸಂಘಟನೆಯಾಗಿದೆ. ಇದಕ್ಕೆ ಯಾವುದೇ ಅನುಮತಿಯಿಲ್ಲ. ಅವರೇ ಒಂದು ಹೆಸರನ್ನಿಟ್ಟುಕೊಂಡು ಚಟುವಟಿಕೆಯನ್ನು ಮಾಡುತ್ತಿದ್ದಾರೆ. ಅವರ ಈ ಎಲ್ಲಾ ಚಟುವಟಿಕೆಗಳ ಬಗ್ಗೆ ,ಹಿನ್ನೆಲೆಯ ಬಗ್ಗೆ ಎಲ್ಲಾ ವಿಚಾರಗಳು ಕೇಂದ್ರದ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿದೆ. ಇದರಿಂದಾಗಿ ಎಲ್ಲಾ ಸಾಕ್ಷಿಗಳನ್ನು ಪಡೆದುಕೊಂಡು ಈ ಬ್ಯಾನ್ ಮಾಡಿದ್ದಾರೆ.
ಇತ್ತೀಚಿನ ಎಲ್ಲಾ ಕೋಮುಗಲಭೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು ಈ ಪಿಎಫ್ಐ,ಸಿಎಫ್ಐ ಸಂಘಟನೆಗಳಾಗಿವೆ.ಈ ಸಂಘಟನೆಗಳು ಎಂದಿಗೂ ದೇಶದ ಪರವಾಗಿ, ಸಮಾಜದ ಉಧ್ಧಾರಕ್ಕಾಗಿ ಕಾರ್ಯನಿರ್ವಹಿಸಿಲ್ಲ. ಹಿಜಾಬ್ ವಿವಾದಗಳಂತಹ ಇನ್ನಿತರ ಸಂದರ್ಭಗಳಲ್ಲಿ ಗಲಭೆಯನ್ನು ಸೃಷ್ಟಿಸಿದ್ದು ಈ ಸಂಘಟನೆಗಳಾಗಿವೆ. ಈ ಕಾರಣದಿಂದಾಗಿ ಪಿಎಫ್ಐ ಅನ್ನು ಬ್ಯಾನ್ ಮಾಡಿದ್ದು ಉತ್ತಮ ಹೆಜ್ಜೆಯಾಗಿದೆ. ಒಂದು ವೇಳೆ ಎಸ್ಡಿಪಿಐ ಇದರಲ್ಲಿ ಕೈಜೋಡಿಸಿದ್ದರೆ ಇದನ್ನು ಕೂಡಾ ಬ್ಯಾನ್ ಮಾಡಲು ಕೇಂದ್ರ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.