ಉಡುಪಿ, ಸೆ 28 (DaijiworldNews/MS): ಪಿಎಫ್ ಐ ನಿಷೇಧ ಮಾಡಿರುವುದು ಸ್ವಾಗತಾರ್ಹವಾಗಿದ್ದು ಈ ಕಠಿಣ ನಿರ್ಧಾರ ತೆಗೆದುಕೊಂಡ ಪ್ರಧಾನ ಮಂತ್ರಿ ಮತ್ತು ಕೇಂದ್ರ ಗೃಹ ಸಚಿವರಿಗೆ ಅಭಿನಂದನೆಗಳು ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
"ಬಹಳ ವರ್ಷಗಳಿಂದ ಕರ್ನಾಟಕ ಮತ್ತು ದೇಶದ ವಿವಿಧ ಭಾಗಗಳಲ್ಲಿ ಪಿಎಫ್ ಐ ಹಿಂಸೆಯನ್ನು ಪ್ರಚೋದಿಸಿದೆ. ಭಾರತವನ್ನು ದುರ್ಬಲಗೊಳಿಸುವ ಪ್ರಯತ್ನ ಈ ಸಂಘಟನೆ ಮಾಡುತ್ತಿದ್ದು ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ನಿರಂತರವಾಗಿ ಹತ್ಯೆ ಮಾಡುವ ದುಷ್ಕೃತ್ಯ ಪಿಎಫ್ ಐ ಸಂಘಟನೆ ಮಾಡುತ್ತಿತ್ತು. ಅಲ್ಲದೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುತ್ತೇವೆ ಎಂಬ ಹೇಳಿಕೆಯನ್ನು ನೀಡುತ್ತಿದ್ದರು" ಎಂದು ಆರೋಪಿಸಿದ್ದಾರೆ.
"ಆ ಸಂಘಟನೆಯ ಕಾರ್ಯಕರ್ತರನ್ನು ಕಾಂಗ್ರೆಸ್ ಪೋಷಿಸಿದ್ದೆ, ಪಿಎಫ್ ಐ ಇಷ್ಟು ದೊಡ್ಡ ಪ್ರಮಾಣದಲ್ಲಿ ಕರ್ನಾಟಕದಲ್ಲಿ ಬೆಳೆಯಲು ಕಾರಣ. 175 ಜನರ ಮೇಲೆ ಇದ್ದ ಕೇಸ್ ಅನ್ನು ಸಿದ್ದರಾಮಯ್ಯ ಕಾಲದಲ್ಲಿ ವಾಪಾಸ್ ಪಡೆದಿತ್ತು. ನಮ್ಮ ಸರಕಾರ ಇವತ್ತು ಬದ್ದತೆ ಪ್ರದರ್ಶಿಸಿದೆ.ಮಂಗಳೂರು, ಶಿವಮೊಗ್ಗ ಘಟನೆಯಿಂದ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಆಗಿತ್ತು.ಈ ಹಿಂದೆ ವಾಜಪೇಯಿ ಕಾಲದಲ್ಲಿ ಬಿಜೆಪಿ ಸಿಮಿ ಸಂಘಟನೆಯನ್ನು ನಿಷೇಧಿಸಿತ್ತು. ಅದರ ಇನ್ನೊಂದು ರೂಪದಲ್ಲಿ ಪಿಎಫ್ಐ ಹುಟ್ಟಿಕೊಂಡಿತ್ತು. ಇದಕ್ಕೆ ಹಣಕಾಸು ನೆರವು, ಬೆಂಬಲ ನೀಡಿದವರ ಕೂಡಾ ತನಿಖೆ ಆಗುತ್ತೆ.ಭಾರತದಲ್ಲಿದ್ದುಕೊಂಡು ಭಾರತವನ್ನು, ಈ ನೆಲವನ್ನು ಪ್ರೀತಿಸಬೇಕು ಹೊರತು ದ್ರೋಹ ಬಗೆಯಬಾರದು" ಎಂದುಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ