ಉಡುಪಿ, ಸೆ 27 (DaijiworldNews/SM): ಒಂದು ವಾರದಲ್ಲಿ ಉಡುಪಿ, ಕಾಪು ಅಥವಾ ಬ್ರಹ್ಮಾವರ ಕ್ಷೇತ್ರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಯಾರಿಗಾದರೂ ಸಿಕ್ಕರೆ ಅವರ ಜೊತೆ ಫೋಟೋ ತೆಗೆದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಕಳುಹಿಸಿ. ಇದರಲ್ಲಿ ಮೊದಲ ಐದು ವಿಜೇತರಿಗೆ 5000 ರೂಪಾಯಿ ಬಹುಮಾನ ನೀಡಲಾಗುವುದು ಎಂದು ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಸವಾಲು ಹಾಕಿದ್ದಾರೆ.
ಮಲ್ಪೆ ಕರಾವಳಿ ರಸ್ತೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಸೆ.27ರಂದು ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಕರಂದ್ಲಾಜೆ ವಿರುದ್ಧ ವಿಶೇಷ ಬಹುಮಾನ ನೀಡಿ ಸವಾಲು ಎಸೆದರು.
ಕಂಬಳ ಎಮ್ಮೆಗಳ ಟ್ಯಾಗ್ ಹಿಡಿದು ಪಾದಯಾತ್ರೆ ಆರಂಭಿಸಿದ ಮಿಥುನ್ ರೈ. ಕಲ್ಮಾಡಿ ಚರ್ಚ್ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕರಾವಳಿ ಬೈಪಾಸ್ ಬಳಿ ಸಮಾಪನಗೊಂಡಿತು.