ಮಂಗಳೂರು, ಫೆ 11(SM): ನಗರದ ಅಡ್ಡೂರು ಗ್ರಾಮದ ಫಲ್ಗುಣಿ ನದಿಯಿಂದ ಕಬ್ಬಿಣದ ದೋಣಿ ಮೂಲಕ ಮರಳು ತೆಗೆಯುತ್ತಿರುವ ಮಾಹಿತಿ ಮೇರೆಗೆ ಮರಳು ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಆರೋಪಿಗಳಿಂದ ಮರಳುಗಾರಿಕೆಗೆ ಬಳಸಿದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಜಪೆ ಪೊಲೀಸ್ ಠಾಣಾ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ತೆಗೆಯುತ್ತಿದ್ದ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ಈ ಮರಳುಗಾರಿಕೆಗೆ ತೊಡಗಿಸಿದ 3 ಕಬ್ಬಿಣದ ದೋಣಿ ಹಾಗೂ ಡ್ರೆಜಿಂಗ್ ಯಂತ್ರ ಸಹಿತ 5 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.