ಬಂಟ್ವಾಳ, ಸೆ 27 (DaijiworldNews/MS): ಹಿಂಸೆಯ ಮುಖಾಂತರವೇ ವ್ಯವಸ್ಥೆ ಯನ್ನು ಬುಡಮೇಲು ಗೊಳಿಸುವ ಪಿ.ಎಫ್.ಐ ಸಂಘಟನೆಯನ್ನು ಹತ್ತಿಕ್ಕಲು ಬಿಜೆಪಿ ಸರಕಾರ ಬದ್ದವಾಗಿದ್ದು, ಈ ಕುರಿತು ಕಾರ್ಯ ಚರಣೆ ನಡೆಸುತ್ತಿರುವ ಪೊಲೀಸ್ ಕಾರ್ಯ ಶ್ಲಾಘನೀಯ, ಅವರ ಕಾರ್ಯ ಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಬಿಸಿರೋಡಿನಲ್ಲಿ ಮಾಧ್ಯಮ ದವರ ಮಾತನಾಡುತ್ತಾ,ಸಮಾಜ ಘಾತುಕ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದಿರುವವರ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುತ್ತಿದೆ ಎಂದರು. ಕಾಂಗ್ರೇಸ್ ಅಧಿಕಾರವಧಿಯಲ್ಲಿ ನಡೆದಿದ್ದ ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ಹಾಗೂ ಇತ್ತೀಚೆಗೆ ಶಿವಮೊಗ್ಗ ಹಾಗೂ ಪುತ್ತೂರುನಲ್ಲಿ ನಡೆದಿದ್ದ ಕೊಲೆ ಕೃತ್ಯದಲ್ಲಿ ಪಿಎಫ್ ಐ ಸಂಘಟನೆಯ ಕೈವಾಡ ಇರುವುದು ತನಿಖೆಯಲ್ಲಿ ತಿಳಿದು ಬಂದಿದೆ, ಹೀಗಾಗಿ ಅವರ ವಿರುದ್ಧ ಎನ್ ಐ ಎ ಹಾಗೂ ಪೊಲೀಸರು ಕ್ರಮಕೈಗೊಂಡಿದ್ದಾರೆ, ಸಮಾಜ ದ್ರೋಹಿಗಳಿಗೆ ವಿಜೃಂಭಿಸಲು ಬಿಜೆಪಿ ಸರ್ಕಾರ ಅವಕಾಶ ನೀಡುವುದಿಲ್ಲ, ಸಿದ್ಧರಾಮಯ್ಯ ವಿಜೃಂಭಿಸಲು ಅವಕಾಶ ಕೊಟ್ಟಿದ್ದರು.
ಶಂಕಿತ ಉಗ್ರನಿಂದ ಬಂಟ್ವಾಳದಲ್ಲಿ ಬಾಂಬ್ ರಿಹರ್ಸಲ್ ನಡೆದಿರುವ ವಿಚಾರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಿರುವ ಇಂತಹಾ ಕೃತ್ಯಗಳನ್ನು ಎಎನ್ಐ ಹಾಗೂ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ್ ಉಪಸ್ಥಿತರಿದ್ದರು.