ಮಂಗಳೂರು, ಸೆ.26 (DaijiworldNews/SM): ಮಂಗಳೂರು ದಸಾರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿದೆ. ಕ್ಷೇತ್ರದ ನವೀಕರಣದ ಶಿಲ್ಪಿ ಹಾಗೂ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ.
ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಂಗಳೂರು ದಸರಾವನ್ನು ದೇವರೇ ನಡೆಸುತ್ತಾರೆ. ಈ ದಸರಾ ಮಹೋತ್ಸವ ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ಸ್ವತಃ ಜನಾರ್ದನ ಪೂಜಾರಿಯಿಂದಲೂ ದಸರಾ ಮಹೋತ್ಸವ ನಿಲ್ಲಿಸಲಾಗದು ಎಂದಿದ್ದಾರೆ.
ಮುಂದಿವ ವರ್ಷದ ದಸರಾ ಮಹೋತ್ಸವ ನೋಡುವ ಅವಕಾಶ ಸಿಗಲಿದೆ ಎಂಬುವುದು ಗೊತ್ತಿಲ್ಲ. ಆದರೆ, ಈ ವರ್ಷ ದಸರಾಗೆ ಚಾಲನೆ ನೀಡುವ ಅವಕಾಶ ಭಗವಂತ ಕಲ್ಪಿಸಿದ್ದಾನೆ ಎಂದು ಭಾವನಾತ್ಮಕ ಮಾತುಗಳನ್ನು ಜನಾರ್ದನ ಪೂಜಾರಿಯವರು ಆಡಿದ್ದಾರೆ.