ಮಂಗಳೂರು, ಸೆ 26 (DaijiworldNews/DB): ಮಂಗಳೂರು ಮೂಲದ ಪಿಎಫ್ಐ ನಾಯಕನನ್ನು ದೆಹಲಿಯಲ್ಲಿ ಪೊಲೀಸರು ಸೆಪ್ಟಂಬರ್ 26ರ ಸೋಮವಾರ (ಇಂದು) ಬಂಧಿಸಿದ್ದಾರೆ.
ಪಿಎಫ್ಐ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಅಶ್ರಫ್ ಬಂಧಿತ ಆರೋಪಿ. ಪುತ್ತೂರಿನ ಅಜೆಕಾರು ನಿವಾಸಿಯಾಗಿರುವ ಈತ ಮಂಗಳೂರಿನ ಕಂಕಣವಾಗಿಯಲ್ಲಿ ವಾಸವಿದ್ದ. ಪಿಎಫ್ಐ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಆತ ಜಾರ್ಖಂಡ್, ಒರಿಸ್ಸಾ ಸೇರಿದಂತೆ ಮೂರು ರಾಜ್ಯಗಳಿಗೆ ಸಂಚಾಲಕನಾಗಿ ಕೆಲಸ ಮಾಡುತ್ತಿದ್ದ. ಅಲ್ಲದೆ ಈ ಮೂರೂ ರಾಜ್ಯಗಳಲ್ಲಿಯೂ ಆತನ ನಿರ್ದೇಶನದಂತೆಯೇ ಚಟುವಟಿಕೆಗಳು ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಸ್ಥಳೀಯವಾಗಿ ಆತ ಸಂಘಟನೆಯ ಚಟುವಟಿಕೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಈಗಾಗಲೇ ಬಂಧಿತರು ನೀಡಿದ ಮಾಹಿತಿಯಾಧಾರಿತವಾಗಿ ಅಶ್ರಫ್ನನ್ನು ಬಂಧಿಸಲಾಗಿದ್ದು, ಮಧ್ಯಾಹ್ನ ಪೊಲೀಸರು ಕಸ್ಟಡಿಗೆ ಪಡೆದುಕೊಂಡರು. ಇದಲ್ಲದೆ, ಪೆಟ್ರೋಲ್ ಬಾಂಬ್ ದಾಳಿ ನಡೆಸಿದ ಆರೋಪದಲ್ಲಿ ತಮಿಳುನಾಡಿನಲ್ಲಿ14 ಮಂದಿ ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಇದೇ ವೇಳೆ ಬಾಗಲಕೋಟೆ ಜಿಲ್ಲೆ ಇಳಕಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ನಳಿನ್ಕುಮಾರ್, ರಾಜ್ಯದಲ್ಲಿ ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳನ್ನು ನಿಷೇಧ ಮಾಡಲು ಬೇಕಾದ ಎಲ್ಲಾ ಪೂರಕ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.