ಕಾರ್ಕಳ, ಸೆ 26 (DaijiworldNews/MS): ಅವಿಶ್ವಾಸ ನಿರ್ಣಯದ ಮೂಲಕ ವಜಾಗೊಂಡಿದ್ದ ಮಾಳ ಗ್ರಾಮ ಪಂಚಾಯತ್ತಿನ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ನಿಗದಿಯಾಗಿರುವಂತೆ ಸೆ.26ರಂದು ಚುನಾವಣೆ ನಡೆದಿರುತ್ತದೆ. ಬಿಜೆಪಿ ಬೆಂಬಲಿತ ಸದಸ್ಯೆ ರಕ್ಷಿತಾ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಳ ಗ್ರಾಮ ಪಂಚಾಯತ್ ಎಲ್ಲಾ 15 ಕ್ಷೇತ್ರಗಳು ಬಿಜೆಪಿ ಬೆಂಬಲಿತ ಸದಸ್ಯರುಗಳೇ ಗೆಲುವು ಸಾಧಿಸಿದರಾದರೂ, ಆಡಳಿತ ವ್ಯವಸ್ಥೆಯಲ್ಲಿ ಸದಸ್ಯರುಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿರುವ ಘಟನಾವಳಿಯಿಂದಾಗಿ ಹಾಗೂ ಪಕ್ಷಾ ನಿರ್ದೇಶನದ ವಿರುದ್ಧವಾಗಿ ಅಂದಿನ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ವರ್ತಿಸಿದರೆಂಬ ಆರೋಪದ ಹಿನ್ನಲೆಯಲ್ಲಿ ಅವಿಶ್ವಾಸ ಗೊತ್ತುವಳಿಯ ಹಿನ್ನಲೆಯಲ್ಲಿ ಅಧ್ಯಕ್ಷರನ್ನು ಪದಚ್ಯತಿ ಗೊಳಿಸಲಾಗಿತ್ತು.
ಪಕ್ಷದ ಮುಖಂಡರು ಗ್ರಾಮ ಪಂಚಾಯತ್ನ ಎಲ್ಲ ಸದಸ್ಯರೊಂದಿಗೆ ಮಾತುಕತೆ ನಡೆಸಿ ಆಂತರಿಕ ಭಿನ್ನಾಭಿಪ್ರಾಯಗಳಿಗೆ ತೇಪೆಹಾಕುವ ಮೂಲಕ ಮಾಳ ಚೌಕಿಯ 5ನೇ ವಾರ್ಡಿನಿಂದ ರಕ್ಷಿತಾ ಶೆಟ್ಟಿಯವರು ಅಧ್ಯಕ್ಷರಾನ್ನಾಗಿ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆಗೆ ಅನುವು ಮಾಡಿದ್ದಾರೆ.
ಚುನಾವಣಾಧಿಕಾರಿಯಾಗಿ ಈಶ್ವರ ನಾಯ್ಕ ಕರ್ತವ್ಯ ನಿರ್ವಹಿಸಿದ್ದರು.