ಕಾಸರಗೋಡು, ಸೆ.26 (DaijiworldNews/HR): ಪಿಕಪ್ ವಾಹನಕ್ಕೆ ಸೈಡ್ ನೀಡಿಲ್ಲ ಎಂಬ ಕಾರಣಕ್ಕೆ ತಂಡವೊಂದು ಕರ್ನಾಟಕ ಕೆಎಸ್ಆರ್ಟಿಸಿ ಬಸ್ಸು ಸಿಬಂದಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಕುಂಬಳೆ ಸಮೀಪದ ಆರಿಕ್ಕಾಡಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಸಾಂದರ್ಭಿಕ ಚಿತ್ರ
ಹಲ್ಲೆಯಿಂದ ಗಾಯಗೊಂಡ ಬಸ್ಸು ಚಾಲಕ ಅಬ್ದುಲ್ ಖಾದರ್ (35) ಮತ್ತು ನಿರ್ವಾಹಕ ದಾಸಪ್ಪ (34) ರವರನ್ನು ಕುಂಬಳೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸು ಆರಿಕ್ಕಾಡಿ ಬಳಿ ಅಡ್ಡಗಟ್ಟಿದ ತಂಡವು ಹಲ್ಲೆ ನಡೆಸಿದ್ದು, ಪ್ರಯಾಣಿಕರನ್ನು ಬೇರೆ ಬಸ್ಸಿನಲ್ಲಿ ಕಳುಹಿಸಿಕೊಡಲಾಯಿತು.
ಇನ್ನು ಬಸ್ ಸಿಬಂದಿಗಳು ಕುಂಬಳೆ ಠಾಣೆಗೆ ತೆರಳಿ ದೂರು ನೀಡಿದ್ದು, ಗಾಯಗೊಂಡಿರುವ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.