ಉಡುಪಿ, ಸೆ 25 (DaijiworldNews/DB): ವಿಪಕ್ಷಗಳ ಪೇಸಿಎಂ ಅಭಿಯಾನಕ್ಕೆ ಕೌಂಟರ್ ನೀಡುವ ಸಲುವಾಗಿ ಯೂತ್ ಫಾರ್ ಡೆವಲಪ್ಮೆಂಟ್ ಆರ್ಗನೈಝೇಶನ್ ’ನಾವು ಕಾಮನ್ ಸಿಎಂ ಜೊತೆಗಿದ್ದೇವೆ’ ಎಂಬ ಅಭಿಯಾನವನ್ನು ಉಡುಪಿಯಲ್ಲಿ ಆರಂಭಿಸಿದೆ.
ಜನಸಾಮಾನ್ಯರ ಮುಖ್ಯಮಂತ್ರಿಯವರಿಗೆ ನಮ್ಮ ಬೆಂಬಲ ಎಂದು ಬರೆದಿರುವ ಪೋಸ್ಟರ್ನ್ನು ನಗರದ ವಿವಿಧೆಡೆ ಅಂಟಿಸಲಾಗುತ್ತಿದೆ. ಆ ಮೂಲಕ ವಿಪಕ್ಷಗಳ ಪೇಸಿಎಂ ಅಭಿಯಾನಕ್ಕೆ ಕೌಂಟರ್ ನೀಡುವ ಉದ್ದೇಶವನ್ನು ಹೊಂದಿದೆ.
ಅಭಿಯಾನದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆ ಸದಸ್ಯರು, ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬೆಂಬಲಿಸುವುದಕ್ಕೆ ನಾವಿದ್ದೇವೆ. ಅವರೊಬ್ಬ ಜನಸಾಮಾನ್ಯರ ಮುಖ್ಯಮಂತ್ರಿ. 40% ಸರ್ಕಾರ ಮುಂತಾದ ಆರೋಪಗಳಿಗೆ ಯಾವುದೇ ಅರ್ಥವಿಲ್ಲ. ಬಿಜೆಪಿಯ ಯುವ ಮೋರ್ಚಾ ಸದಸ್ಯರು ಕೂಡಾ ನಮ್ಮ ಅಭಿಯಾನದೊಂದಿಗೆ ಕೈ ಜೋಡಿಸಿದ್ದಾರೆ. ಪೋಸ್ಟರ್ಗಳನ್ನು ನಗರದ ವಿವಿಧೆಡೆ ಅಂಟಿಸಲಾಗಿದೆ ಎಂದರು.