ಬಂಟ್ವಾಳ, ಸೆ 18 (DaijiworldNews/SM): ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ವರ್ಷಂಪ್ರತಿ ದಸರಾ ಉತ್ಸವವಕ್ಕೆ ಅವಹೇಳನ ಕಾರಿ ಪೋಸ್ಟ್ ಹಾಕಿದ ವ್ಯಕ್ತಿ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿಟ್ಲ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬಿಲ್ಲವ ಸಮುದಾಯಕ್ಕೆ ಅವಮಾನ ಮಾಡುವ ಉದ್ದೇಶದಿಂದ ಮತ್ತು ಸಮುದಾಯದ ಧಾರ್ಮಿಕ ಭವನಗಳಿಗೆ ಧಕ್ಕೆ ತಂದು ಸಮಾಜದಲ್ಲಿ ಶಾಂತಿ ಕದಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ತುಣುಕುಗಳನ್ನು ಹಾಕಿರುವ ಬಗ್ಗೆ ಪದ್ಮನಾಭ ಸಾಮಂತ್ ಎಂಬವರ ಮೇಲೆ ಕಠಿಣ ಕಾನೂನು ಕ್ರಮಗೊಳ್ಳಬೇಕು ಎಂದು ಒತ್ತಾಯಿಸಿ
ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ), ಕೊಳ್ಳಾಡು, ಸಾಲೆತ್ತೂರು, ಇದರ ಅಧ್ಯಕ್ಷ ವಿಶ್ವನಾಥ ಪೂಜಾರಿ ಅವರು ವಿಟ್ಲ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.