ವಿಟ್ಲ, ಸೆ 22 (DaijiworldNews/SM): ರಾಜ್ಯದೆಲ್ಲೆಡೆ ಪಿಎಫ್ ಐ ನ ಕಚೇರಿ ಹಾಗೂ ನಾಯಕರ ಮನೆ ಮೇಲೆ ಎನ್.ಐ.ಎ ನಡೆಸಿದ ದಾಳಿಯನ್ನು ಖಂಡಿಸಿ ವಿಟ್ಲದ ಸಂತೆ ರಸ್ತೆ ಬಳಿ ಪಿ.ಎಫ್.ಐ. ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದೆಲ್ಲೆಡೆ ಪಿಎಫ್ ಐ ಕಚೇರಿ ಮತ್ತು ಮನೆಗಳಿಗೆ ಎನ್ ಐ ಎ ನಡೆಸಿದ ದಾಳಿಯನ್ನು ಕೂಡ ಖಂಡಿಸಲಾಯಿತು. ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಖಲಂದರ್ ಪರ್ತಿಪ್ಪಾಡಿ, ಪಿಎಫ್ಐ ಮುಖಂಡ ರಹಮಾನ್ ಮಠ, ರಹೀಂ ಆಲಾಡಿ ಸಹಿತ ಹಲವರು ಉಪಸ್ಥಿತರಿದ್ದರು.