ಉಡುಪಿ, ಸೆ 22 (DaijiworldNews/HR): ಅಂತರ ಜಿಲ್ಲಾ ದ್ವಿಚಕ್ರ ವಾಹನ ಕಳ್ಳನೊಬ್ಬನನ್ನು ಉಡುಪಿ ಪೊಲೀಸ್ ಸಿಬ್ಬಂದಿ ಬಂಧಿಸಿದ್ದು, ಬಂಧಿತನನ್ನು ಗದಗ ಜಿಲ್ಲೆಯ ಗೋವಿಂದಪ್ಪ ಯಾನೆ ಗಿರೀಶ್ ಎಂದು ಗುರುತಿಸಲಾಗಿದೆ.
ಈತ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡನಗುಡ್ಡೆ, ಸೋದೆ ಮಠ ವ್ಯಾಪ್ತಿಯಲ್ಲಿ ಹಲವು ಸ್ಕೂಟರ್ ಹಾಗೂ ಬೈಕ್ಗಳನ್ನು ಕಳವು ಮಾಡಿದ್ದು, ಮಂಗಳೂರು ಬಂದರ್ ಪೊಲೀಸ್ ಠಾಣೆ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದ್ವಿಚಕ್ರ ವಾಹನ ಕಳ್ಳತನದಲ್ಲೂ ಭಾಗಿಯಾಗಿದ್ದ.
ರಾಣೆಬೆನ್ನೂರು ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಗಿರೀಶ್ 7 ವರ್ಷಗಳಿಂದ ಜೈಲು ಸೇರಿದ್ದ ಎನ್ನಲಾಗಿದೆ.
ಇನ್ನು ಬಂಧಿತ ಗಿರೀಶ್ನಿಂದ 2 ಲಕ್ಷ ಮೌಲ್ಯದ 5 ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗಣೇಶ್ ಆನ್ಲೈನ್ ಶಾಪಿಂಗ್ ಕಂಪನಿಗೆ ಡೆಲಿವರಿ ಬಾಯ್ ನೀಡಿದ ದೂರಿನ ಆಧಾರದ ಮೇಲೆ, ಗಣೇಶ್ ಗ್ರಾಹಕರಿಗೆ ಉತ್ಪನ್ನವನ್ನು ತಲುಪಿಸಲು ಬಂದಾಗ ಅವರ ಸ್ಕೂಟರ್ ಅನ್ನು ಅಪಾರ್ಟ್ಮೆಂಟ್ನಿಂದ ಕಳವು ಮಾಡಲಾಗಿದೆ. ಸಿಸಿಟಿವಿ ಆಧಾರದಲ್ಲಿ ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.