ಮೂಡುಬಿದಿರೆ, ಫೆ 10 (MSP): ಜರ್ಮನಿ ಟೆಕ್ನಿಕಲ್ ಯುನಿವರ್ಸಿಟಿ ಆಫ್ ಮ್ಯೂನಿಕ್ನಲ್ಲಿ ಪವರ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಿರುವ ಮೂಡುಬಿದಿರೆ ಮೂಲದ ಡೆನಿಮ್ ಡಿ'ಕೋಸ್ತ ಮಾಲಿನ್ಯ ರಹಿತ ರಿನ್ಯೂವೆಬಲ್ ಸೋಲಾರ್ ಹೈಬ್ರಿಡ್ ವ್ಯವಸ್ಥೆ ಅನ್ವೇಷಣೆ ಮಾಡುವ ಮೂಲಕ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅವರ ಈ ವಿಶೇಷ ಸಾಧನೆಗೆ ಜರ್ಮನಿ ಬವೇರಿಯನ್ ಸೋಲಾರ್ ಎನರ್ಜಿ ಅಸೋಸಿಯೇಶನ್ 1.20 ಲಕ್ಷ ನಗದಿನೊಂದಿಗೆ `ಅತ್ಯುತ್ತಮ ಮಾಸ್ಟರ್ ಥಿಸೀಸ್ ಅವಾರ್ಡ್‘ ನೀಡಿ ಗೌರವಿಸಿದೆ.
ಸೋಲಾರ್ ಹೈಬ್ರಿಡ್ ವ್ಯವಸ್ಥೆ, ಬೇಕಾದಲ್ಲಿಗೆ ಕೊಂಡೊಯ್ಯಬಹುದಾದ ಮೊಬೈಲ್ ಪ್ರೋರ್ಟೆಬಲ್ ಸೋಲಾರ್ ಘಟಕವಾಗಿದ್ದು ಮನೆಯ ವಿದ್ಯುತ್ ಉಪಕರಣ ಗಳಲ್ಲದೆ, ಹೆಚ್ಚು ಸಾಮರ್ಥ್ಯ ಬ್ಯಾಟರಿ ಅಳವಡಿಸಿದರೆ ಪಂಪ್ಸೆಟ್ ಅನ್ನು ಕೂಡ ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತದೆ. ವಿಶ್ವ ಸಂಸ್ಥೆಯ ಯುನೈಟೆಡ್ ನೇಷನ್ಸ್ ವರ್ಲ್ಡ್ ಫುಡ್ ಪ್ರೊಗ್ರಾಂ ಸಹಕಾರದೊಂದಿಗೆ ‘ದಿ ಚೇರ್ ಆಫ್ ಎನರ್ಜಿ ಎಕಾನಮಿ ಅಂಡ್ ಅಪ್ಲಿಕೇಶನ್ ಟೆಕ್ನಾಲಜಿಯಲ್ಲಿ ಡೆನಿಮ್ ತಮ್ಮ ಈ ಸಂಶೋಧನೆ ನಡೆಸಿದ್ದಾರೆ. ಈ ವ್ಯವಸ್ಥೆಯಿಂದಾಗಿ ಶೇ40 ರಷ್ಟು ನಿರ್ವಹಣಾ ವೆಚ್ಚದಲ್ಲಿ ಕಡಿತ, ಶೇ 85 ರಷ್ಟು ಮಾಲಿನ್ಯ ರಹಿತ ರಿನ್ಯೂವೆಬಲ್ ಸೋಲಾರ್ ಹೈಬ್ರಿಡ್ ವ್ಯವಸ್ಥೆ ರೂಪಿಸಿದ್ದಾರೆ. ವಿವಿಧ ದೇಶಗಳ 300 ಕ್ಕೂ ಅಧಿಕ ಪ್ರದೇಶಗಳಲ್ಲಿ ವಿದ್ಯುತ್ ಸೌಲಭ್ಯ ಪಡೆಯಲು ಅಸಾಧ್ಯವಾಗಿದ್ದು, ಅಂತಹ ಪ್ರದೇಶಗಳಲ್ಲಿ ಡೆನಿಮ್ ಸೋಲಾರ್ ವ್ಯವಸ್ಥೆ ಕಲ್ಪಿಸಲು ವಿಶ್ವಸಂಸ್ಥೆಯ ಅವಕಾಶ ನೀಡಿದೆ. ಇವರ ಈ ಸಂಶೋಧನೆಗೆ ಟುಮ್ ವಿ.ವಿ.ಯಲ್ಲಿ ಪ್ರೊ.ಡಾ. ಇಂಗ್ ಆಲ್ರಿಚ್ ವ್ಯಾಗ್ನರ್ ಅವರು ಡೆನಿಮ್ ಮಾರ್ಗದರ್ಶನ ನೀಡಿದ್ದಾರೆ
29 ಹರೆಯ ಡೆನಿಮ್ ಅವರ ಫ್ರಾಂಕ್ ಡಿ'ಕೋಸ್ತ-ಜ್ಯೂಲಿಯೆಟ್ ಡಿ'ಕೋಸ್ತ ದಂಪತಿಯ ಪುತ್ರರಾಗಿದ್ದು ಇವರು ತಮ್ಮ್ ಅಪ್ರಾಥಮಿಕ ಶಿಕ್ಷಣವನ್ನು ಮೂಡುಬಿದಿರೆಯ ರೋಟರಿ ಆಂಗ್ಲಮಾಧ್ಯಮ ಶಾಲೆ, ಅಲಂಗಾರು ಸೈಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಗಿಸಿದ್ದಾರೆ. ಆ ಬಳಿಕ ಆಳ್ವಾಸ್ ಪ.ಪೂ. ಕಾಲೇಜಿನಲ್ಲಿ ಓದಿದ ಡೆನಿಮ್ ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 'ಮೆಕ್ಯಾನಿಕಲ್ ಇಂಜಿನಿಯರಿಂಗ್' ಪದವಿ ಪಡೆದರು.