ಮಂಗಳೂರು, ಸೆ 20 (DaijiworldNews/HR): ಪ್ರತಿ ವರ್ಷದ ವಿಷುವತ್ ಸಂಕ್ರಾಂತಿಯ ದಿನದಂದು (ಮಾರ್ಚ್20 ಹಾಗೂ ಸೆಪ್ಟೆಂಬರ್ 23) ಹಗಲು ಹಾಗೂ ರಾತ್ರಿಗಳ ಅವಧಿ ಹೆಚ್ಚು ಕಡಿಮೆ ಸಮನಾಗಿರುತ್ತದೆ. ಈ ದಿನಗಳಲ್ಲಿ ಸೂರ್ಯನ ಕಿರಣಗಳು ಭೂಮಿಯ ಭ್ರಮಣದ ಅಕ್ಷಕ್ಕೆ ಲಂಬವಾಗಿ ಬೀಳುತ್ತವೆ. ಇತರ ಅಕ್ಷಾಂಶಗಳಲ್ಲಿ ಸೂರ್ಯನ ಕಿರಣಗಳು ಓರೆಯಾಗಿ ಬೀಳುತ್ತವೆ. ಆ ದಿನದಂದು ಮಾತ್ರ ಸೂರ್ಯನ ಕಿರಣಗಳ ಓರೆಕೋನವು ಆ ಸ್ಥಳದ ಅಕ್ಷಾಂಶಕ್ಕೆ ಸಮನಾಗಿರುತ್ತದೆ.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ಸೆ.23ರ ಬೆಳಿಗ್ಗೆ 11 ಗಂಟೆಯಿಂದ ಈ ದಿನದ ಹಗಲಿನಲ್ಲಿ ಮಾಡಬಹುದಾದ ಖಗೋಳಶಾಸ್ತ್ರದ ಚಟುವಟಿಕೆಗಳನ್ನು ಮಾಡಲಾಗುವುದು.
ಆಸಕ್ತರು ವೆಬ್ಸೈಟ್ ಅಥವಾ ಶರಣಯ್ಯ ಮೊ.ಸಂಖ್ಯೆ: 7353457392 ಮೂಲಕ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.