ಉಡುಪಿ, ಸೆ 20 (DaijiworldNews/MS): ಜನಸಂಘ ಕಾಲದ ಉಡುಪಿ ನಗರ ಸಭೆ ಆಡಳಿತವನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.
ಗುಜರಾತಿನಲ್ಲಿ ನಡೆಯುತ್ತಿರುವ ಮೇಯರ್ ಮತ್ತು ಉಪಮೇಯರ್ ಸಮ್ಮೇಳನದಲ್ಲಿ ಮಾತನಾಡಿದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನಸಂಘದ ಕಾಲಘಟ್ಟದಲ್ಲಿಯೂ ಉಡುಪಿ ನಗರದ ಜನತೆ ಜನಸಂಘದ ನೇತೃತ್ವದ ಉಡುಪಿ ನಗರದ ಸ್ಥಳೀಯ ಆಡಳಿತಕ್ಕೆ ಅವಕಾಶ ನೀಡಿದ್ದರು.
ಅಂದಿನಿಂದಲೂ ಉತ್ತಮವಾದ ಆಡಳಿತ ನೀಡಿದ್ದರಿಂದ ಈಗಲೂ ಬಿಜೆಪಿ ಆಡಳಿತದ ಮೂಲಕ ನಿರಂತರವಾದ ಚಟುವಟಿಕೆಯಿಂದ ಪ್ರಥಮ ಸ್ಥಾನ ಪಡೆದು ಜನ ಮೆಚ್ಚುಗೆಯನ್ನು ಗಳಿಸುತ್ತಿದೆ. ಅದು ಪಕ್ಷದ ಮೇಲೆ ನಗರದ ಜನ ಇಟ್ಟಿರುವ ವಿಶ್ವಾಸ ಎಂದು ಬಣ್ಣಿಸಿದರು.
ಈ ಸಭೆಯಲ್ಲಿ ರಾಷ್ಟ್ರಾದ್ಯಂತ ಭಾರತೀಯ ಜನತಾ ಪಾರ್ಟಿ ನೇತೃತ್ವದ ಮೇಯರ್, ಉಪಮೇಯರ್ ಗಳು ಉಪಸ್ಥಿತರಿದ್ದರು.