ಕುಂದಾಪುರ, ಸೆ 20 (DaijiworldNews/HR): ಹೋಟೆಲ್ ನಡೆಸುತ್ತಿದ್ದ ಉದ್ಯಮಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೆಪ್ಟಂಬರ್ 19ರಂದು ಬೈಂದೂರಿನಲ್ಲಿ ನಡೆದಿದೆ.
ಮೃತರನ್ನು ಕಲ್ತೋಡು ಗ್ರಾಮದ ಕಬ್ಸೆ ಬಾಳೆಹಿತ್ಲು ನಿವಾಸಿ ರಾಘವೇಂದ್ರ ಶೆಟ್ಟಿ (37) ಎಂದು ಗುರುತಿಸಲಾಗಿದೆ.
ರಾಘವೇಂದ್ರ ಶೆಟ್ಟಿ ಅವರು ಬೈಂದೂರಿನಲ್ಲಿ ಹೋಟೆಲ್ ಹೊಂದಿದ್ದು, ಸೆ.18ರಂದು ಮನೆಯಿಂದ ಹೊರ ಹೋಗುವಾಗ ರಾತ್ರಿ ಹೊಟೇಲ್ನಲ್ಲಿಯೇ ಉಳಿದುಕೊಳ್ಳುವುದಾಗಿ ಹೇಳಿ ಮನೆಗೆ ಹೋಗಿದ್ದು, ಮತ್ತೆ ವಾಪಸ್ಸಾಗುವುದಿಲ್ಲ.
ಇನ್ನು ಕಬ್ಸೆ ಕೋಳಿ ಫಾರಂ ಬಳಿಯ ಗೋಡಂಬಿ ಮರದ ಕೊಂಬೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶೆಟ್ಟಿ ಅವರ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಈ ಸಂಬಂಧ ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.