ಬಂಟ್ವಾಳ, ಸೆ 20 (DaijiworldNews/MS): ಮಂಗಳೂರು-ಬಿಸಿ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ನ ಅಸಭ್ಯ ವರ್ತನೆ ವಿರುದ್ಧ ಮಹಿಳೆಯೊಬ್ಬರು ಇಲ್ಲಿನ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಗಳೂರಿನಿಂದ ಬಿಸಿ ರೋಡ್ಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಕಂಡಕ್ಟರ್ ಬಾಗಲಕೋಟೆ ಮೂಲದ ರಾಜು ಎಂಬಾತನ ವಿರುದ್ದ ದೂರು ನೀಡಿದ್ದಾರೆ.
ಪ್ರೀತಂ ಎಂಬವರು ಮಂಗಳೂರು ಪಂಪ್ ವೆಲ್ ಎಂಬಲ್ಲಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಏರಿ ಬಿಸಿರೋಡಿಗೆ ಟಿಕೆಟ್ ಪಡೆಯುತ್ತಾರೆ. ಪ್ರತಿ ದಿನ ಇವರು ಬಸ್ ನಲ್ಲಿ ಪ್ರಯಾಣಿಸುವ ಕಾರಣ ಮಂಗಳೂರು- ಬಿಸಿರೋಡು 26 ರೂ ಟಿಕೆಟ್ ಗಾಗಿ ಅವರ ಬಳಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ 106 ರೂ ನೀಡಿದ್ದಾರೆ.
ಕಂಡಕ್ಟರ್ ಮಹಿಳೆಗೆ ನಿಖರವಾದ ದರವನ್ನು ನೀಡುವಂತೆ ಕೇಳಿದ್ದು, ಚಿಲ್ಲರೆ ಇಲ್ಲ ಎಂದಾಗ ಕುಪಿತಗೊಂಡ ಕಂಡಕ್ಟರ್ ಆಕೆಯನ್ನು ಅಸಭ್ಯವಾಗಿ ನಿಂದಿಸಿ ಚೇಂಜ್ ಇಲ್ಲದಿದ್ದರೆ ಬಸ್ ಹತ್ತಬೇಡಿ ಎಂದು ಹೇಳಿದ್ದಾರೆ. ಮಾತ್ರವಲ್ಲದೇ ಫರಂಗಿಪೇಟೆ ಔಟ್ ಪೋಸ್ಟ್ ಬಳಿ ಬಸ್ ನಿಲ್ಲಿಸಿ ಮಹಿಳೆಗೆ ದೂರು ನೀಡುವಂತೆ ಕಂಡಕ್ಟರ್ ಸವಾಲು ಹಾಕಿದ್ದು, ಅಲ್ಲದೆ ಬಿಸಿರೋಡು ವರೆಗೂ ಚಿಲ್ಲರೆ ಕೊಡದೆ ಕಂಡೆಕ್ಟರ್ ಸತಾಯಿಸಿರುವುದಾಗಿ ಮಹಿಳೆ ದೂರು ನೀಡಿದ್ದಾರೆ.