ಕೋಟ, ಸೆ 20 (DaijiworldNews/MS): ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಅವ್ಯವಸ್ಥೆಯ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಮತ್ತೊಮ್ಮೆ ಎಚ್ಚರಿಕೆಯ ಕರೆಗಂಟೆ ನೀಡಿದೆ.
ಸೋಮವಾರ ಸಾಸ್ತಾನ ಟೋಲ್ ಪ್ಲಾಜಾ ಬಳಿ ಹೆದ್ದಾರಿ ಜಾಗೃತಿ ಸಮಿತಿ ಹಾಗೂ ಸ್ಥಳೀಯರು ಜಮಾಯಸಿದ್ದು ಸ್ಥಳೀಯಾಗಿರುವ ದಾರಿದೀಪ, ಅಸಮರ್ಪಕ ಅವೈಜ್ಞಾನಿಕ ಹಂಪ್ ನಿರ್ಮಾಣ, ಪಡುಬಿದ್ರೆಯಿಂದ ಕುಂದಾಪುರದವರೆಗೆ ರಸ್ತೆ ಎರಡು ಬದಿಗಳಲ್ಲಿ ಮಣ್ಣು ಸೆವೆದುಹೋಗಿದ್ದು ಇದರಿಂದ ಅವಗಡಗಳು ಸಂಭವಿಸುತ್ತಿದ್ದು,ಟೋಲ್ ನಲ್ಲಿ ಆ್ಯಂಬುಲೇನ್ಸ್ ಇಲ್ಲದಿರುವುದು, ಟೋಲ್ ರಸ್ತೆ ಮಧ್ಯೆ ಪಾರ್ಕಿಂಗ್ ಮಾಡುವುದು ಸೇರಿದಂತೆ ಸ್ಥಳೀಯರ ವಾಹನ ಸವಾರರಿಗೆ ಸಮಸ್ಯೆ ಕುರಿತಂತೆ ಟೋಲ್ ಮ್ಯಾನೇಜರ್ ಗೆ ಕಡಕ್ ಎಚ್ಚರಿಕೆ ನೀಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ ನಾಯರಿ ಹೆದ್ದಾರಿಗಳಲ್ಲಿ ಅವ್ಯವಸ್ಥೆಯಾಗಿರುವ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ಬಗೆಹರಿಸದಿದ್ದರೆ ಮತ್ತೊಮ್ಮೆ ಹೋರಾಟಕ್ಕಿಳುವುದಾಗಿ ಎಚ್ಚರಿಸಿದರು. ಈ ವೇಳೆ ಟೋಲ್ ಮ್ಯಾನೇಜರ್ ಸುನೀಲ್ ಎರಡು ಮೂರು ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದರಲ್ಲದೆ ಟೋಲ್ ಸಿಬ್ಬಂದಿಗಳಿಂದ ಬಳಿ ಎದುರಾಗುವ ಸಮಸ್ಯೆಗಳು ಪುನಾವರ್ತನೆ ಗೊಳ್ಳದಂತೆ ಎಚ್ಚರಿಕೆ ವಹಿಸುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಹೆದ್ದಾರಿ ಜಾಗೃತಿ ಸಮಿತಿಯ ಪ್ರಮುಖರಾದ ಪ್ರತಾಪ್ ಶೆಟ್ಟಿ ಸಾಸ್ತಾನ, ಪ್ರಶಾಂತ್ ಶೆಟ್ಟಿ, ಅಚ್ಯುತ್ ಪೂಜಾರಿ, ಡೆನಿಸ್ ಡಿಸೋಜ, ವೈಬಿ ರಾಘವೇಂದ್ರ, ವಾಹನ ಚಾಲಕರು,ಆಟೋ ಚಾಲಕರು,ಕೋಟ ಆರಕ್ಷಕ ಠಾಣಾಧಿಕಾರಿ ಮಧು ಬಿ.ಇ ಮತ್ತಿತರರು ಉಪಸ್ಥಿತರಿದ್ದರು.