ಉಡುಪಿ, ಸೆ 19 (DaijiworldNews/MS): ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಎಲ್ಲಾ ಆಟೋ ರಿಕ್ಷಾಗಳ ದರವನ್ನು ಪರಿಷ್ಕರಣೆಗೊಳಿಸಿ ಉಡುಪಿ ಜಿಲ್ಲಾ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ.
ಪರಿಷ್ಕ್ರತ ಆದೇಶದ ಅನುಸಾರ 1.5 ಕಿಲೋ ಮೀಟರ್ ವರೆಗೆ ಕನಿಷ್ಟ ದರ 40 ರುಪಾಯಿ ನಿಗದಿ ಪಡಿಸಲಾಗಿದೆ. ತದನಂತರದ ಪ್ರತಿ ಕಿಲೋ ಮೀಟರ್ ಗೆ 20 ರುಪಾಯಿ ದರವನ್ನು ನಿಗದಿ ಮಾಡಲಾಗಿದೆ.
ಈ ಹಿಂದೆ ಪ್ರತಿ 1.5 ಕಿಲೋ ಮೀಟರ್ ಗೆ 30 ರುಪಾಯಿ ತದನಂತರದ ಪ್ರತಿ ಕಿಲೋ ಮೀಟರ್ ಗೆ 18 ರುಪಾಯಿ ದರವನ್ನು ಪಡೆಯಲಾಗುತಿತ್ತು. ಪ್ರಸ್ತುತ ಏರಿಕೆಯಾಗಿರುವ ಇಂಧನ ಮೌಲ್ಯ, ಬಿಡಿ ಭಾಗಗಳ ದರದ ಆಧಾರದ ಮೇಲೆ ದರ ಪರಿಷ್ಕರಣೆಗೆ ಉಡುಪಿ ಜಿಲ್ಲೆಯ 5 ಆಟೋ ಯೂನಿಯನ್ ಗಳು ಮನವಿ ಸಲ್ಲಿಸದ್ದವು.