ಉಡುಪಿ, ಸೆ 19 (DaijiworldNews/MS): ಮೂರು ದಿನಗಳ ಹಿಂದೆ ಶಿರೂರು ಟೋಲ್ ಗೇಟ್ ಬಳಿ ನಿಂತಿದ್ದ ಲಾರಿಯೊಂದರ ಐದು ಟೈರ್ ಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ಶ್ಯಾಮ್ ಶಂಕರ್ (24), ಆಕಾಶ್ ಬಪ್ಪಾ ಶಿಂಧೆ (19) ಮತ್ತು ಅಮೂಲ್ ರಾಮ್ ಕಾಳೆ (22) ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ: ಅಂಕೋಲ ಮೂಲದ ಪುರುಷೋತ್ತಮ್ ಎಂಬವರು ತಮ್ಮ ಹೊಸ ಲಾರಿಯನ್ನು ಶಿರೂರು ಟೋಲ್ ಬಳಿ ನಿಲ್ಲಿಸಿ ನಿದ್ದೆಗೆ ಜಾರಿದ್ದರು. ಈ ವೇಳೆ ಆರೋಪಿಗಳು ಚಾಲಕನ ಮೇಲೆ ಮಂಪರು ಬರಿಸುವ ಸ್ಪ್ರೇ ಹೊಡೆದು ಪ್ರಜ್ಞೆ ತಪ್ಪಿ ಬೀಳುವಂತೆ ಮಾಡಿ ಟ್ರಕ್ನ ಐದು ಹೊಸ ಟೈರ್ಗಳನ್ನು ಕದ್ದೊಯ್ದಿದ್ದರು. ಇಡೀ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಾಹಿತಿ ಕಲೆ ಹಾಕಿದ ಪೊಲೀಸರು
ಬೈಂದೂರು ಒತ್ತಿನೆಣೆ ರಾ.ಹೆದ್ದಾರಿಯಲ್ಲಿ ಆರೋಪಿಯನ್ನು ಬಂಧಿಸಿ 1.85 ಲಕ್ಷ ರೂಪಾಯಿ ಮೌಲ್ಯದ ಐದು ಟೈರ್ಗಳು ಮತ್ತು ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಲೈಲ್ಯಾಂಡ್ ಟ್ರಕ್ ಅನ್ನು ಜಪ್ತಿ ಮಾಡಿದ್ದಾರೆ.