ಕಾಸರಗೋಡು, ಸೆ 19 (DaijiworldNews/HR): ಮಲಗಿದ್ದ ತಾಯಿಯ ತಲೆಗೆ ರುಬ್ಬುವ ಕಲ್ಲು ಎತ್ತಿ ಹಾಕಿ ಕೊಲೆಗೆತ್ನಿಸಿ ಪುತ್ರ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಮಡಿಕೈಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮಡಿಕೈ ಆಲಾಯಿಯ ಸುಧಾ ರವರ ಪುತ್ರ ಸುಜಿತ್(17) ಮೃತ ಪಟ್ಟವನು.
ಗಂಭೀರ ಗಾಯಗೊಂಡ ತಾಯಿ ಸುಧಾರವರನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆದಾಖಲಿಸಲಾಗಿದೆ.
ಇನ್ನು ಬೊಬ್ಬೆ ಕೇಳಿ ಪರಿಸರವಾಸಿಗಳು ಧಾವಿಸಿ ಬಂದಾಗ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದ್ದು, ಪುತ್ರ ನಾಪತ್ತೆಯಾಗಿದ್ದನು. ಬಳಿಕ ಪರಿಶೀಲಿಸಿದಾಗ ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪುತ್ರ ಪತ್ತೆಯಾಗಿದ್ದಾನೆ.
ಅಂಬಲತ್ತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸುಧಾ ಪತಿಯನ್ನು ತೊರೆದಿದ್ದು, ಮಗ ಸುಜಿತ್ ಜೊತೆ ವಾಸವಾಗಿದ್ದರು.