ಮಂಗಳೂರು, ಸೆ 18 (DaijiworldNews/DB): ಸಂಘ ಸಂಸ್ಥೆಗಳು, ಪತ್ರಕರ್ತರು ಸೇರಿದಂತೆ ಸರ್ವರ ಸಹಕಾರದೊಂದಿಗೆ ನಗರದ ಉದ್ಯಾನವನಗಳ ಸುಸ್ಥಿತಿಗೆ ಆದ್ಯತೆ ನೀಡಲಾಗುವುದು ಎಂದು ಮೇಯರ್ ಜಯಾನಂದ ಅಂಚನ್ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕ ಮತ್ತು ಇನ್ನರ್ ವೀಲ್ ಕ್ಲಬ್ ಮಂಗಳೂರು ನಾರ್ತ್ ಸಹಯೋಗದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮವನ್ನು ಹ್ಯಾಟ್ ಹಿಲ್ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ ಇಂದಿರಾ ಪ್ರಿಯದರ್ಶಿನಿ ಉದ್ಯಾನವನ ಆವರಣದಲ್ಲಿಂದು ಅವರು ಉದ್ಘಾಟಿಸಿದರು.
ಉದ್ಯಾನವನಗಳ ಅಭಿವೃದ್ಧಿ, ಸ್ವಚ್ಛ ಪರಿಸರ, ಮೂಲ ಸೌಕರ್ಯಗಳ ಅಭಿವೃದ್ಧಿ ಮೂಲಕ ನಗರದ ಅಭಿವೃದ್ದಿಯಾಗುತ್ತದೆ. ಹೀಗಾಗಿ ಇವುಗಳ ಅಭಿವೃದ್ದಿಗೆ ಆದ್ಯ ಗಮನ ಹರಿಸಲಾಗುತ್ತಿದೆ ಎಂದವರು ತಿಳಿಸಿದರು.
ಉಪ ಮೇಯರ್ ಪೂರ್ಣಿಮಾ, ಮನಪಾ ಸದಸ್ಯೆ ಸಂಧ್ಯಾ ಮೋಹನ ಆಚಾರ್ಯ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದ ಸಭಾಪತಿ ಶಾಂತಾರಾಮ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಇನ್ನರ್ ವೀಲ್ ಕ್ಲಬ್ ಮಂಗಳೂರು ನಾರ್ತ್ ಅಧ್ಯಕ್ಷೆ ವಸಂತಿ ಕಾಮತ್, ಪದಾಧಿಕಾರಿಗಳಾದ ಮಾಲಿನಿ ಹೆಬ್ಬಾರ್, ಭಾರತಿ ಪ್ರಕಾಶ್, ಜಯಶ್ರೀ ಬಾಸ್ರಿ, ಉಮಾ ರಾವ್, ರಮಾಮಣಿ ಭಟ್, ಶೋಭಾ ಭಟ್, ಉಷಾ ಸುಧಾಕರ್, ಶೋಭಾ ಶಿವರಾಮ್, ರೆಡ್ ಕ್ರಾಸ್ ಘಟಕದ ಕೋಶಾಧಿಕಾರಿ ಮೋಹನ್ ಶೆಟ್ಟಿ, ಡಾ. ಕೆ. ಆರ್. ಕಾಮತ್, ಡಾ. ಸಚ್ಚಿದಾನಂದ ರೈ, ಸಂಘಟಕರಾದ ರವೀಂದ್ರನಾಥ ಉಚ್ಚಿಲ, ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಗೀತಾ ಬಿ .ರೈ, ಪ್ರೆಸ್ಸ್ ಕ್ಲಬ್ ಕಾರ್ಯದರ್ಶಿ ಆರಿಫ್ ಪಡುಬಿದ್ರಿ, ಭಾರತೀಯ ಕಾರ್ಯನಿರತ ಪತ್ರಕರ್ತರ ರಾಷ್ಟ್ರೀಯ ಸಮಿತಿ ಸದಸ್ಯ ಪಿ .ಬಿ .ಹರೀಶ್ ರೈ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ. ಎನ್., ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ರಾಘವ, ಪ್ರೀತಂ ರೈ, ಲಲಿತ, ಎನ್ಐಟಿಕೆಯ ದೈಹಿಕ ನಿರ್ದೇಶಕ ಶಿವರಾಂ, ಹಿರಿಯರಾದ ಅಚ್ಯುತ, ಮೋಹನ ಆಚಾರ್ಯ, ಭಾರತಿ ಉಚ್ಚಿಲ್,ವಿಭಾ ಶ್ರೀನಿವಾಸ್ ನಾಯಕ್, ವರುಣ್ ಬಿ. ರೈ ,ಅಮೃತಾನಂದಮಯಿ ಸಂಸ್ಥೆಯ ಪ್ರತಿನಿಧಿ ಮಾಧವ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.