ಮಂಗಳೂರು, ಸೆ 17 (DaijiworldNews/HR): ಜಿಲ್ಲಾಡಳಿತ, ಕೇಂದ್ರ ಸರ್ಕಾರದ ಭೂವಿಜ್ಞಾನ ಮಂತ್ರಾಲಯ, ಕರಾವಳಿ ಕಾವಲು ಪಡೆ, ನೆಹರೂ ಯುವ ಕೇಂದ್ರ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೇಂದ್ರ ಪರಿಸರ, ಅರಣ್ಯ ಇಲಾಖೆ ಹಾಗೂ ಎನ್ಎಸ್ಎಸ್ ಸಹಯೋಗದಲ್ಲಿ ಸ್ಪಚ್ಛ ಹಾಗೂ ಸುರಕ್ಷಿತ ಕಡಲ ತೀರ ಅಭಿಯಾನವನ್ನು ಪಣಂಬೂರಿನ ಕಡಲ ತೀರದಲ್ಲಿ ಸೆ.17ರ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿತ್ತು.
ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಸೆ.17ರಂದು ಎರಡು ವಿಶೇಷತೆಗಳಿವೆ, ಮೊದಲನೆಯದ್ದು ಜಗತ್ತಿನ ಸ್ಪಚ್ಛತಾ ದಿನ, ಎರಡನೇಯದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವಾಗಿದೆ, ಅವರು ಪ್ರಧಾನಿಯಾದನಂತರ ದೇಶದಲ್ಲಿ ಸ್ಪಚ್ಚತಾ ಆಂದೋಲನಾ ಜಾಗೃತಿಗೊಂಡಿದೆ, ಈ ಆಂದೋಲದಲ್ಲಿ ವಿವಿಧ ರೀತಿಯ ಸ್ಪಚ್ಛತಾ ಕೆಲಸಗಳನ್ನು ಮಾಡಲಾಗಿದೆ, ಇದೀಗ ಕಡಲ ತೀರದ ಸ್ಪಚ್ಛತಾ ಅಭಿಯಾನಕ್ಕೆ ಮಹತ್ವ ನೀಡಿರುವ ಪ್ರಧಾನಮಂತ್ರಿಯವರ ಕೆಲಸಕ್ಕೆ ಕರಾವಳಿ ಕಾವಲು ಪಡೆಯೂ ಕೈಜೋಡಿಸಿದೆ, ಸ್ಪಚ್ಚ ಭಾರತ್, ಸ್ಪಚ್ಚ ಸಾಗರದಡಿ ದೇಶವನ್ನು ಸ್ಪಚ್ಚವಾಗಿಡುವ ಕೆಲಸದಲ್ಲಿ ನಾಗರೀಕರು ಸಹ ಕೈಜೋಡಿದ್ದಾರೆ, ರಾಷ್ಟ್ರೀದ ಆರೋಗ್ಯವನ್ನು ರಕ್ಷಣೆ ಮಾಡುವ ಈ ಕೆಲಸ ಯಶಸ್ವಿಯಾಗಲಿ ಎಂದು ಹಾರೈಸಿದರು.
ಶಾಸಕರಾದ ಡಾ.ವೈ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಕೊಚ್ಚಿಯ ವಿಜ್ಞಾನಿ ಡಾ. ಸ್ಮಿತಾ, ಪ್ರವಾಸೋಸ್ಯಮ ಇಲಾಖೆಯ ಉಪ ನಿರ್ದೇಶಕ ಮಾಣಿಕ್ಯ, ಪರಿಸರ ಇಲಾಖೆಯ ಅಧಿಕಾರಿ ಮಹೇಶ್ ಕುಮಾರ್, ಕಾರ್ಯಕ್ರಮದ ನೋಡಲ್ ಅಧಿಕಾರಿ ರಘುವೀರ್ ಸೂಟರ್ ಪೇಟೆ, ಕರಾವಳಿ ಕಾವಲು ಪಡೆ ಡಿಐಜಿ ವೆಂಕಟೇಶ್ ಬಾಬು, ಜಿಲ್ಲಾ ವಿಪತ್ತು ನಿರ್ವಹಣ ಪರಿಣತ ವಿಜಯ್ ಕುಮಾರ್ ಪೂಜಾರ್ ಸೇರಿದಂತೆ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು