ಪುತ್ತೂರು,ಸೆ 17 (DaijiworldNews/MS) : ರೈಲಿನಲ್ಲಿ ಬೇರೆ ಬೇರೆ ಧರ್ಮೀಯ ಯುವಕರು ಮತ್ತು ಯುವತಿಯರು ಒಟ್ಟಿಗೆ ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಪುತ್ತೂರು ರೈಲು ನಿಲ್ದಾಣದ ಬಳಿ ಜಮಾಯಿಸಿದ ಘಟನೆ ಶುಕ್ರವಾರ ಸೆ.16 ರಂದು ನಡೆದಿದೆ.
ಮಧ್ಯಾಹ್ನದ ವೇಳೆ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ತೆರಳುವ ರೈಲಿನ ಒಂದೇ ಬೋಗಿಯಲ್ಲಿ ಹಿಂದೂ ಯುವತಿಯರು ಮತ್ತು ಮುಸ್ಲಿಂ ಯುವಕರು ಪ್ರಯಾಣಿಸುತ್ತಿದ್ದ ಮಾಹಿತಿ ಪಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಪುತ್ತೂರು ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ನಗರ ಠಾಣಾ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ ಯುವಕರೊಂದಿಗೆ ಪಯಣಿಸುತ್ತಿದ್ದ ಯುವತಿಯರು ಕಾಣಿಯೂರಿನಲ್ಲಿ ರೈಲಿನಿಂದ ಇಳಿದು ಹೋಗಿದ್ದರು ಎನ್ನಲಾಗಿದೆ.