ಮಂಗಳೂರು, ಫೆ 08(SM): ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ನೈಟ್ ಲೈಟ್ ಫಿಶಿಂಗ್ ಗೆ ಸಾಂಪ್ರದಾಯಿಕ ಮೀನುಗಾರರು ನಿರಂತರವಾಗಿ ವಿರೋಧವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಮೀನುಗಾರರ ಹೋರಾಟಕ್ಕೆ ಜಯವೆಂಬಂತೆ ಹೈಕೋರ್ಟ್ ಬೆಳಕಿನ ಮೀನುಗಾರಿಕೆಯನ್ನು ನಿಷೇಧಿಸಿ ಆದೇಶ ನೀಡಿದೆ. ಆದೇಶ, ಕಾನೂನು ಜಾರಿಗೆ ಬಂದ ಬಳಿಕ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೆ ಇಲಾಖೆ ನಿರ್ಧರಿಸಿದೆ.
ಸಾಂದರ್ಭಿಕ ಚಿತ್ರ
ಒಂದೊಮ್ಮೆ ನಿಯಮ ಮೀರಿ ನೈಟ್ ಲೈಟ್ ಫಿಶಿಂಗ್ ನಡೆಸಿದ್ದಲ್ಲಿ, ಅಂತಹ ಮೀನುಗಾರಿಕಾ ದೋಣಿಗಳ ಪರವಾನಿಗೆ, ನೋಂದಣಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುವುದು. ಹಾಗೂ ಡೀಸೆಲ್ ವಿತರಣೆ ನಿಲ್ಲಿಸಲಾಗುವುದು ಎಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಇಷ್ಟರಲ್ಲೂ ಎಚ್ಚೆತ್ತುಕೊಳ್ಳದೆ, ಪುನರಾವರ್ತನೆಗೊಂಡಲ್ಲಿ ಬೋಟ್ ನ ನೋಂದಣಿಯನ್ನು ಶಾಶ್ವತವಾಗಿ ರದ್ದುಗೊಳಿಸಲಾಗುವುದು ಎಂಬುವುದಾಗಿ ಇಲಾಖೆ ಖಡಕ್ ಸೂಚನೆ ರವಾನಿಸಿದೆ.