ಮಣಿಪಾಲ, ಸೆ 16 (DaijiworldNews/SM): ಮೃತ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ನಡೆಸಲು ಸಹೋದರನಿಗೆ ಅಸಹಾಯಕತೆ ಎದುರಾದಾಗ, ಮಣಿಪಾಲ ಪೋಲಿಸರು ಬಂಧುಗಳಾಗಿ ಅಂತ್ಯಸಂಸ್ಕಾರವನ್ನು ಗೌರಯುತವಾಗಿ ಇಂದ್ರಾಳಿಯ ರುದ್ರಭೂಮಿಯಲ್ಲಿ ನಡೆಸಿರುವ ಘಟನೆಯೊಂದು ಗುರುವಾರ ವರದಿಯಾಗಿದೆ.
ಪೋಲಿಸರ ಮಾನವೀಯತೆಯ ಸೇವಾಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಪೋಲಿಸರಿಗೆ ಸಮಾಜಸೇವಕ ನಿತ್ಯಾನಂದ ಒಳಕಾಡು, ರುದ್ರಭೂಮಿ ಮೇಲ್ವಿಚಾರಕ ಪ್ರಶಾಂತ ಸಹಕರಿಸಿದರು.
ಮಣಿಪಾಲ ಮಣ್ಣಪಳ್ಳ ಕೆರೆಯಲ್ಲಿ ಮೃತದೇಹವೊಂದು ಗುರುವಾರ ಪತ್ತೆಯಾಗಿತ್ತು. ಮೃತನು ಗಾಳಗಾರಿಕೆ ನಡೆಸುತ್ತಿರುವಾಗ ಆಯಾತಪ್ಪಿ ಕೆರೆಗೆ ಬಿದ್ದು ಮೃತಪಟ್ಟಿದ್ದನು. ಮೃತ ವ್ಯಕ್ತಿ ಕುಂದಾಪುರದ ಪ್ರಕಾಶ್(40) ಎಂದು ಗುರುತಿಸಲಾಗಿತ್ತು. ಮೃತನ ಸಹೋದರ ಸಂಪರ್ಕಿಸಿ ಶವವನ್ನು ಗುರುತಿಸಿದ್ದರು.