ಕಾರ್ಕಳ, ಸೆ 16 (DaijiworldNews/HR): ಸೆ.17ರಿಂದ 13 ಅಂಶಗಳ ವಿಶೇಷ ಸೇವಾ ಪಾಕ್ಷಿಕ ಕಾರ್ಯಕ್ರಮಗಳು ಕಾರ್ಕಳ ಸಹಿತ ಜಿಲ್ಲೆಯಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟು ಹಬ್ಬವನ್ನು ಜಿಲ್ಲೆಯಾದ್ಯಂತ ಅರ್ಥಪೂರ್ಣವಾಗಿ ಆಚರಿಸಲು ಭಾರತೀಯ ಜನತಾ ಪಾರ್ಟಿ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ ಹಾಗೂ ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಜಂಟೀಯಾಗಿ ತಿಳಿಸಿದ್ದಾರೆ.
ಕಾರ್ಕಳ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಶೂಕ್ರವಾದದಂದು ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸೆ.17 ಮತ್ತು18ರಂದು ರಕ್ತದಾನ ಶಿಬಿರ, ಸೆ,17ರಿಂದ ಅ.2ರ ತನಕ ಲಸಿಕೆ ಬಾಕುಳಿದವರಿಗೆ ಜೀವ ರಕ್ಷಕ ಲಸಿಕಾ ಅಭಿಯಾನ, ಸೆ.20ರಿಂದ 21ರ ಪ್ರದಾನಿ ನರೇಂದ್ರ ಮೋದಿಯವರ ಜೀವನ ಚರಿತ್ರೆ ಪ್ರದರ್ಶಿನಿ ಮೂಲಕ ದೇಶ, ರಾಜ್ಯದ ಅಭಿವೃದ್ಧಿ, ಬದಲಾವಣೆ ಕುರಿತು ಸಮ್ರಗ ಚಿತ್ರಣ ಪ್ರದರ್ಶಿಸುವುದು. ಸೆ.21ರಿಂದ 22ರ ತನಕ ಜಿಲ್ಲೆಯಾದ್ಯಂತ ಆರೋಗ್ಯ ತಪಾಸಣೆ, ಸೆ.22ರಿಂದ 23ರ ತನಕ ಅರಳಿ ಮರ ನೆಡುವ ಅಭಿಯಾನ, ಸೆ.24ರಿಂದ 25ರ ತನಕ ಕಮಲೋತ್ಸವ ಪಂಡಿತ್ ದೀನ್ ದಯಾಳ್ ಉಪಾಧ್ಯಯ ಜಯಂತಿ ಆಚರಣೆ, ಅಂದು ಮನ್ಕಿ ಬಾತ್ ಪ್ರಸಾರವಾಗಲಿದೆ. ಸೆ.25ರಿಂದ 29ರ ತನಕ ಲಾನುಭವಿಗಳ ಸಭೆ ಹಾಗೂ ನೋಂದಣಿ ಅಭಿಯಾನ ನಡೆಯಲಿದೆ.
ಸೆ.26ರಿಂದ 27ರ ತನಕ ಅಮ್ರತ ಸರೋವರ ನಿರ್ಮಾಣ, ಸೆ.28ರಿಂದ 29ರ ತನಕ ಅಂಗನವಾಡಿ ಸೇವಾ ದಿವಸ್ ಆಚರಣೆ ನಡೆಯಲಿದ್ದು ಮಹಿಳಾ ಮೋರ್ಚಾದವರು ಕ್ಷೇತ್ರದ 1 ಅಂಗನವಾಡಿ ಕೇಂದ್ರವನ್ನು ಮಾದರಿಯಾಗಿಸುವ ಕಾರ್ಯವಿದು. ಸೆ.30ರಂದು ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣಾ ಅಭಿಯಾನ ನಡೆಯಲಿದೆ. ಸೆ.೩೦ರಂದು ಕ್ಷಯರೋಗ ನಿರ್ಮೂಲನ ಅಭಿಯಾನದಡಿ ಕ್ಷೇತ್ರದ 5 ಮಂದಿ ಕ್ಷಯರೋಗಿಗಳನ್ನು ಗುಣಮುಖರಾಗುವ ತನಕ ನೋಡಿಕೊಳ್ಳಲಾಗುವುದು. ಅ.2ರಂದು ನಗರ ಬಿಜೆಪಿ, ಯುವ ಮೋರ್ಚಾ ಸಹಿತ ವಿವಿಧ ಘಟಕಗಳಿಂದ ಸ್ವಚ್ಚತಾ ಅಭಿಯಾನ ನಡೆಯಲಿರುವುದು. ಅ.2ರಂದು ಮಹಾತ್ಮಗಾಂಧಿ ಹಾಗೂ ಲಾಲ್ಬಹೂದರ್ ಶಾಸ್ತ್ರಿಯ ಜನ್ಮದಿನದಂದು ಖಾದಿ ಉತ್ಸವ ನಡೆಯಲಿದೆ ಎಂದವರು ಹೇಳಿದರು.
ಈ ಎಲ್ಲ ಕಾರ್ಯಕ್ರಮಗಳು ಕಾರ್ಕಳ ಕ್ಷೇತ್ರದಲ್ಲಿಯೂ ನಡೆಯಲಿದ್ದು, ಬಿಜೆಪಿ ಮಂಡಲ, ನಗರ ಬಿಜೆಪಿ, ಮಹಿಳಾ ಮೋರ್ಚಾ, ಯುವ ಮೋರ್ಚಾ, ಹಿಂದುಳಿದ ವರ್ಗ, ಇತರೆ ಘಟಕಗಳ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದವರು ಹೇಳಿದರು.
ಬಿಜೆಪಿಯ ಪ್ರಮುಖರಾದ ಶಿವಕುಮಾರ್, ಶ್ರೀನಿಧಿ ಹೆಗ್ಡೆ, ಜಯರಾಮ್ ಸಾಲ್ಯಾನ್, ರವೀಂದ್ರ ಮಡಿವಾಳ, ಬಿಜೆಪಿ ವಕ್ತಾರ ಹರೀಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಸೆ.17ರಂದು ನಗರದಲ್ಲಿ ನಡೆಸಲು ಉದ್ದೇಶಿಸಿರುವ ರಸ್ತೆ ದುರಸ್ಥಿಗಾಗಿ ಆಗ್ರಹಿಸಿ ನಡೆಯಲಿರುವ ಪ್ರತಿಭಟನೆಯೂ ರಾಜಕೀಯ ದುರುದ್ದೇಶ ಹೊಂದಿದೆ. ಕಾಂಗ್ರೆಸ್ ಕಾಲದಲ್ಲಿ ಒಳ್ಳೆಯ ರಸ್ತೆಗಳಿಗಾಗಿ ಟಾರ್ಚ್ ಹಾಕಿ ಹುಡುಕುವ ಸ್ಥಿತಿ ಇತ್ತು. ಈಗ ಹದಗೆಟ್ಟ ರಸ್ತೆ ಎಲ್ಲಿದೆ ಅಂತ ಟಾರ್ಚ್ ಹಾಕಿ ಹುಡುಕುವ ಪರಿಸ್ಥಿತಿ ಕಾರ್ಕಳ ಕಾಂಗ್ರೆಸ್ಗೆ ಬಂದೊದಗಿಗೆ. ಕಾಂಗ್ರೆಸ್ನವರು ಆಗ್ರಹಿಸುತ್ತಿರುವ ರಸ್ತೆ ಅಭಿವೃದ್ಧಿಗೆ ಟೆಂಡರು ಪ್ರಕ್ರಿಯೆ ಮುಗಿದಿದ್ದು, ಅಭಿವೃದ್ಧಿ ಕಾಮಗಾರಿಯೊಂದೇ ಬಾಕಿ ಉಳಿದಿದೆ. ನಿರಂತರ ಸುರಿತ್ತಿರುವ ಮಳೆಯಿಂದಾಗಿ ಈ ರಸ್ತೆ ಅಭಿವೃದ್ಧಿಗೆ ತೊಡಕಾಗುತ್ತಿದೆ. ಈ ಮಳೆಗಾಲದಲ್ಲಿ ರಸ್ತೆಗೆ ಹೇಗೆ ಡಾಂಬರು ಹಾಕುವುದಾದರೂ ಹೇಗೆಂದು ಕಾಂಗ್ರೆಸ್ನವರು ಜನತೆಗೆ ತಿಳಿಸಲು ಎಂದು ಸವಾಲು ಹಾಕಿದರು.
ಬಿಜೆಪಿಗರು ಇದೇ ವಿಚಾರವನ್ನು ಮುಂದಿಟ್ಟು ಈ ಹಿಂದೆ ಪ್ರತಿಭಟನೆ ನಡೆಸಿ ಜನತೆಯ ಗಮನಕ್ಕೆ ತಂದಿರುವ ವಿಚಾರವನ್ನು ಅವರ ಗಮನಕ್ಕೆ ತಂದಾಗ ಅಗ ಬಿಜೆಪಿ ಪ್ರತಿಪಕ್ಷದಲ್ಲಿ ಇದ್ದು ಪ್ರಜಾಪ್ರಭುತ್ವದ ರೀತಿಯಲ್ಲಿ ಹೋರಾಟ ನಡೆಸಿತ್ತೆಂದು ಸಮರ್ಥಿಸಿಕೊಂಡರು.