ಕಾಸರಗೋಡು, ಫೆ 09(SM): ಕೂಲಿ ಕಾರ್ಮಿಕರೋರ್ವರನ್ನು ಕೊಲೆಗೈದು ಕಾಡಿನಲ್ಲಿ ಎಸೆದ ಘಟನೆ ಕಾಸರಗೋಡಿನ ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಡೂರಿನಲ್ಲಿ ನಡೆದಿದೆ. ಅಡೂರು ಕಾಟಿಕಜೆ ಮಾವಿನಡಿಯ ಎಂ.ಕೆ ಚಿದಾನಂದ ಕೊಲೆಗೀಡಾದವರು.
ಎಂ.ಕೆ ಚಿದಾನಂದ ಗಣಪ
ಕೃತ್ಯಕ್ಕೆ ಸಂಬಂಧಪಟ್ಟಂತೆ ಗಣಪ ನಾಯ್ಕ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಬುಧವಾರ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದ ಚಿದಾನಂದ ನಾಪತ್ತೆಯಾಗಿದ್ದರು. ರಾತ್ರಿಯಾದರೂ ಮನೆಗೆ ಬರದಿದ್ದುದರಿಂದ ಮನೆಯವರು ಹುಡುಕಾಟ ಆರಂಭಿಸಿದ್ದಾರೆ. ಈ ನಡುವೆ ಗುರುವಾರ ಸಂಜೆ ಮನೆಯಿಂದ ದೂರದ ಕಾಡಿನಲ್ಲಿ ಮೃತದೇಹ ಪತ್ತೆಯಾಗಿದೆ.
ಕಲ್ಲಿನಿಂದ ಮುಖ ತಲೆಗೆ ಜಜ್ಜಿ ಕೊಲೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ರಕ್ತದ ಕಲೆಗಳಿಂದ ಎರಡು ಕಲ್ಲು ಮತ್ತು ಚಪ್ಪಲಿ ಮೃತದೇಹದ ಸಮೀಪ ಪತ್ತೆಯಾಗಿತ್ತು. ಈ ಬಗ್ಗೆ ಸುದ್ದಿ ಅರಿತು ಸ್ಥಳಕ್ಕೆ ತಲುಪಿದ ಆದೂರು ಠಾಣಾ ಪೊಲೀಸರು ತನಿಖೆ ನಡೆಸಿ ಗಣಪ ಸೇರಿದಂತೆ ಶಂಕಿತ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು.
ಆದರೆ ಗಣಪನ ಹೇಳಿಕೆಯಿಂದ ಸಂಶಯಗೊಂಡು ಹೆಚ್ಚಿನ ವಿಚಾರಣೆ ನಡೆಸಿದಾಗ ಈತನೇ ಕೊಲೆ ನಡೆಸಿರುವುದು ಬೆಳಕಿಗೆ ಬಂದಿದೆ