ಮಂಗಳೂರು, ಸೆ 15 (DaijiworldNews/SM): ಸುರತ್ಕಲ್ ನಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಅಕ್ರಮ ಟೋಲ್ ತೆರವು ಹಿನ್ನೆಲೆ ಹಲವು ಪ್ರತಿಭಟನೆ ಮಾಡಲಾಗಿದೆ. 1ತಿಂಗಳಲ್ಲಿ ಟೋಲ್ ತೆರವು ಮಾಡುವುದಾಗಿ ಹೆದ್ದಾರಿ ಪ್ರಾಧಿಕಾರ ಭರವಸೆ ಸಿಕ್ಕಿದೆ. ಈ ಟೋಲ್ ತೆರವು ಆದಾಗ ಅಲ್ಲಿನ ಯುವಕರು ಉದ್ಯೋಗ ಕಳೆದುಕೊಳ್ತಾರೆ. ಈ ಯುವಕ ಯುವತಿಯರಿಗೆ ನಾನು ಆಶ್ವಾಸನೆಯನ್ನು ನೀಡುತ್ತೇನೆ. ಟೋಲ್ ಉದ್ಯೋಗ ಹೋದರೆ ಅವರಿಗೆ ಉದ್ಯೋಗ ನೀಡಲು ಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಯುವಕ-ಯುವತಿಯರಿಗೆ ಅವರ ವಿದ್ಯಾರ್ಹತೆ ಮೇಲೆ ಉದ್ಯೋಗ ನೀಡಲಾಗುತ್ತದೆ. ಅಲ್ಲಿ ೩೧ ಮಂದಿ ಇದ್ದಾರೆ ಅವರೆಲ್ಲರಿಗೂ ಉದ್ಯೋಗ ಅವಕಾಶ ನಾನು ಕೋಡ್ತೇನೆ. ವಿದೇಶಕ್ಕೆ ಹೋಗಲು ಸಿದ್ಧರಿರುವವರಿಗೆ ವಿದೇಶದಲ್ಲಿ ಉದ್ಯೋಗ ನೀಡಲು ಪ್ರಯತ್ನ ಮಾಡಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯರಿಗೆ ಮಾತ್ರ ಈ ಉದ್ಯೋಗದ ಭರವಸೆ ನೀಡ್ತೇನೆ ಎಂದು ಮಂಗಳೂರಿನಲ್ಲಿ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ.