ಕಾರ್ಕಳ, ಸೆ 15 (DaijiworldNews/DB): ತಾಲೂಕಿನ ವಿವಿಧ ಪ್ರಮುಖ ಆಸ್ಪತ್ರೆಗಳಲ್ಲಿ ಜ್ವರದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಉಲ್ಬಣಗೊಳ್ಳುತ್ತಿದೆ. ಅದರಲ್ಲೂ ಶಾಲಾ ಹಾಸ್ಟೆಲ್ಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳಲ್ಲಿ ಜ್ವರ ಹೆಚ್ಚಾಗಿ ಕಂಡು ಬರುತ್ತಿದೆ.
ಸುರಿಯುತ್ತಿರುವ ಜಡಿ ಮಳೆಯಿಂದ ವಾತಾವರಣದಲ್ಲಿ ನಿರಂತರ ಏರುಪೇರಾಗುತ್ತಿರುವುದರಿಂದ ಜನರಲ್ಲಿ ಜ್ವರ, ತಲೆನೋವಿನಂತಹ ಸಾಮಾನ್ಯ ಕಾಯಿಲೆಗಳು ತಲೆದೋರುತ್ತಿವೆ. ಜ್ವರ, ತಲೆನೋವಿನೊಂದಿಗೆ ಶೀತ, ಜ್ವರ, ಮೈಕೈ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಹಲವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಶಾಲಾ ಹಾಸ್ಟೆಲ್ಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಜ್ವರ ಹೆಚ್ಚು ಕಂಡು ಬರುತ್ತಿದೆ.
ಕರೋನಾ, ಇಲಿಜ್ವರ, ಎಚ್1 ಎನ್1, ಮಲೇರಿಯಾ, ಡೆಂಗ್ಯೂ ಕಾಯಿಲೆಗೆ ಒಳಗಾಗುವವರಲ್ಲಿ ಮೊದಲ ಹಂತದಲ್ಲಿ ಜ್ವರ ಕಾಣಿಸುತ್ತಿದೆ. ಇದರ ಹಿನ್ನಲೆಯಲ್ಲಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ವೃದ್ಧಿಸುತ್ತಿದೆ. ವೈದ್ಯಕೀಯ ಪರೀಕ್ಷೆಯ ಮೂಲಕ ಜ್ವರದ ನಿಖರತೆ ಇನ್ನಷ್ಟೇ ತಿಳಿಯಬೇಕಾಗಿದೆ.
ಶಾಲಾ ಹಾಸ್ಟೆಲ್ಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಜ್ವರ ಭಾದೆಗೊಳಗಾಗಿದ್ದು, ಮನ್ನೆಚ್ಚರಿಕೆ ಕ್ರಮವಾಗಿ ಹಾಸ್ಟೆಲ್ನ ಮೇಲ್ವಿಚಾರಕರು ಚಿಕಿತ್ಸೆಗಾಗಿ ಜ್ವರ ಪೀಡಿತ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆಂಬ ಮಾಹಿತಿ ಲಭಿಸಿದೆ.
ಇಲಿಜ್ವರ-23, ಡೆಂಗ್ಯೂ-60 ಪ್ರಕರಣ
ಅವಿಭಜಿತ ಕಾರ್ಕಳ ತಾಲೂಕಿನಲ್ಲಿ ಜನವರಿ ತಿಂಗಳಿನಿಂದ ಆಗಸ್ಟ್ವರೆಗೆ ಒಟ್ಟು 23 ಇಲಿಜ್ವರ ಪತ್ತೆಯಾಗಿದೆ. ಜೂನ್-4, ಜುಲೈ-9, ಆಗಸ್ಟ್-8 ಪ್ರಕರಣ ದಾಖಲಾಗಿದ್ದು, ಸಪ್ಪೆಂಬರ್ ತಿಂಗಳಿನ ಮಾಹಿತಿ ಲಭ್ಯವಾಗಿಲ್ಲ.
60 ಡೆಂಗ್ಯೂ ಪ್ರಕರಣ ದಾಖಲಾಗಿದೆ ಎಂದು ಕಾರ್ಕಳ ತಾಲೂಕು ಆರೋಗ್ಯಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಮಾಹಿತಿ ನೀಡಿದ್ದಾರೆ.