ಉಡುಪಿ, ಸೆ 15 (DaijiworldNews/MS): ಇಬ್ಬರು ಸೂರತ್ನಿಂದ ಬಟ್ಟೆ ಕಳುಹಿಸುದಾಗಿ ಹಣ ಪಡೆದು ಅಂಗಡಿ ಮಾಲೀಕರನ್ನ ನಂಬಿಸಿ ವಂಚಿಸಿರುವ ಘಟನೆ ಉಡುಪಿಯಲ್ಲಿ ಇತ್ತೀಚೆಗೆ ನಡೆದಿದೆ.
ಅವರು ಉಡುಪಿ ನಗರ ಭಾಗದಲ್ಲಿರುವ ಇನ್ನಾ ಕಲೆಕ್ಷನ್ ಅಂಗಡಿಗೆ ಬಂದ ಕಿರಣ್ ಹಾಗೂ ಮತ್ತೊರ್ವ ವ್ಯಕ್ತಿ ತಾವು ಸೂರತ್ನಿಂದ ಕಡಿಮೆ ಬೆಲೆಗೆ ಅಂಗಡಿಗಳಿಗೆ ಬಟ್ಟೆ ಹಾಕುವುದಾಗಿ ಹೇಳಿ ಮಾಲೀಕರನ್ನು ನಂಬಿಸಿದ್ದು, ಮುಂಗಡ ಹಣವನ್ನೂ ಪಡೆದಿದ್ದಾರೆ.
ಸುಮಾರು 50,000 ರೂ ಅಧಿಕ ಮೊತ್ತದ ಚೆಕ್ ಪಡೆದು ವಂಚಿದ್ದಾರೆ ಎಂದು ಠಾಣೆಗೆ ತಿಳಿಸಿದ್ದಾರೆ .ಬಟ್ಟೆಯನ್ನು ಇದುವರೆಗೆ ಅಂಗಡಿಗೆ ಸರಬರಾಜು ಮಾಡದೆ ವಂಚಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.