ಬಂಟ್ವಾಳ, ಸೆ 14 (DaijiworldNews/SM): 50 ಅಡಿ ಆಳದ ಪಾಳು ಬಾವಿಗೆಬಿದ್ದ ಯುವತಿಯನ್ನು ಫ್ರೆಂಡ್ಸ್ ವಿಟ್ಲ ತಂಡದ ಸದಸ್ಯರು ರಕ್ಷಿಸಿ ದ ಘಟನೆ ಅಳಿಕೆಯಲ್ಲಿ ನಡೆದಿದೆ.
ಅಳಿಕೆ ಗ್ರಾಮದ ಮೂಡಾಯಿಬೆಟ್ಟು ಎಂಬಲ್ಲಿ ಈ ಘಟನೆ ನಡೆದಿದ್ದು, ಯುವತಿಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದರು, ಬಾವಿಯೊಳಗೆ ನರಳಾಡುತ್ತಿದ್ದ ಯುವತಿಯ ನರಳಾಟ ಕೇಳಿದ ಸ್ಥಳೀಯರು ತಕ್ಷಣ ಫ್ರೆಂಡ್ಸ್ ವಿಟ್ಲ ತಂಡದ ಮುರಳೀಧರ ಇವರನ್ನು ಸಂಪರ್ಕಿಸಿದ್ದು, ತಕ್ಷಣ ಸ್ಪಂದಿಸಿದ ಮುರಳೀಧರ್ ವಿಟ್ಲ ಮತ್ತು ತಂಡದವರು ಯುವತಿಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ಬಳಿಕ ಗಂಭೀರ ಗಾಯಗೊಂಡ ಯುವತಿಯನ್ನು ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತೆಗೆ ದಾಖಲಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಮುರಳೀಧರ ವಿಟ್ಲ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡದ ಈ ರಕ್ಷಣಾ ಕಾರ್ಯಕ್ಕೆ ನಾಗರಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.