ಉಡುಪಿ, ಸೆ 13 (DaijiworldNews/SM): ನದಿ ಮಧ್ಯದಲ್ಲಿ ಸುಳಿ ಗಾಳಿ ಕಾಣಿಸಿಕೊಂಡು ಕೆಲಕಾಲ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಪಾಪನಾಶಿನಿ ನದಿಯಲ್ಲಿ ಈ ದೃಶ್ಯ ಕಂಡು ಬಂದಿದೆ.
ಇಲ್ಲಿನ ಅಂಬಲಪಾಡಿ ಕಿದಿಯೂರು ಭಾಗದ ಚಕ್ ಪಾದ್ ಎಂಬಲ್ಲಿ ಈ ದೃಶ್ಯ ಕಂಡು ಬಂದಿದೆ. ನದಿಯ ಮಧ್ಯ ಭಾಗದಲ್ಲಿ ಏಕಾಏಕಿಯಾಗಿ ಸುಳಿ ಗಾಳಿ ಎದ್ದು ಕೆಲವೊಂದು ಮೀಟರ್ ದೂರ ಚಲಿಸುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ಈ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಸ್ಥಳೀಯರ ಪ್ರಕಾರ ಸಮುದ್ರದಲ್ಲಿ ಸೈಕ್ಲೋನ್ ಪ್ರಭಾವದಿಂದಾಗಿ ಉಂಟಾದ ತೀವ್ರವಾದ ಗಾಳಿ ನದಿಯ ಮೇಲ್ಮೆಗೆ ಅಪ್ಪಳಿಸುವ ಸಂಧರ್ಭದಲ್ಲಿ ಇಂತಹ ಸುಳಿ ಗಾಳಿ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.
ಸುಳಿ ಗಾಳಿಯ ವಿಡಿಯೋ ವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಜ ವೈರಲ್ ಆಗಿದೆ.