ಉಡುಪಿ, ಸೆ 13 (DaijiworldNews/HR): ಸಂತೃಸ್ತರಿಗೆ ಪರಿಹಾರ ಮುಟ್ಟಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಆದರೆ ಇದುವರೆಗೂ ಸಂತ್ರಸ್ತರಿಗೆ ಪರಿಹಾರ ತಲುಪಿಲ್ಲ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆ ಬಂದ ಪ್ರವಾಹದ ಪರಿಹಾರವನ್ನೇ ಇಲ್ಲಿಯ ತನಕ ಕೊಟ್ಟಿಲ್ಲ. ಆದರೆ ಪ್ರವಾಹ ಬಂದಂತ ಪ್ರದೇಶದ ಶಾಸಕರು ಸಮಾವೇಶದ ಹೆಸರಿನಲ್ಲಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಜನರ ಮೇಲೆ ಎಷ್ಟು ಕಳಕಳಿ ಇದೆ ಎಂದು ಜನರಿಗೆ ತಿಳಿಯುತ್ತದೆ. ಇವತ್ತು ಅಬ್ಬರದ ಭಾಷಣವನ್ನೇ ಬಂಡವಾಳ ಮಾಡಿಕೊಂಡು ಜನರನ್ನು ಮೂರ್ಖನ ರನ್ನಾಗಿಸುವ ನಿರೀಕ್ಷೆಯಲ್ಲಿದ್ದಾರೆ. ತುಂಬಾ ಕೇವಲಾಗಿ ಮಾತನಾಡುವ ಮುಖ್ಯ ಮಂತ್ರಿಯವರನ್ನು ಎಂದೂ ನೋಡಿಲ್ಲ. ಈ ವಿಚಾರದ ಬಗ್ಗೆ ಜನರಿಗೆ ಸಂಪೂರ್ಣ ಮಾಹಿತಿ ಇದೆ, ಜನರು ಮೂರ್ಖರಾಗೊಲ್ಲಾ. ಜನ ಅರ್ಥೈಹಿಸಿಕೊಳ್ಳುತ್ತಾರೆ ಎಂದರು.
ರಾಹುಲ್ ಗಾಂಧಿ ಭಾರತ್ ಜೋಡೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಇಷ್ಟು ಉದ್ದದ ಪಾದಯಾತ್ರೆಯನ್ನು ಮಾಡಲಾಗುತ್ತಿದೆ. ಇವತ್ತು ಆಡಳಿತರೂಢ ಪಕ್ಷ ಧರ್ಮ ಧರ್ಮ ಜಾತಿ ಜಾತಿಗಳ ನಡುವೆ ವಿಭಜನೆ ಮಾಡುವಂತಹ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಎಲ್ಲರನ್ನು ಒಂದು ಕುಟುಂಬ ಎನ್ನುವ ರೀತಿಯಲ್ಲಿ ಒಗ್ಗೂಡಿಸುತ್ತಿದೆ. ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ಅದನ್ನೇ ಹೇಳುತ್ತಿದೆ. ನಮ್ಮ ದೇಶದಲ್ಲಿ ವಿವಿಧ ಜಾತಿ ಮತ ಭೇದದ ಜನರಿದ್ದು ಅವರನ್ನು ಸಂವಿಧಾನದ ಅಡಿಯಲ್ಲಿ ಒಗ್ಗೂಡಿಸುವ ಕಾರ್ಯ ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದಿದ್ದಾರೆ.
ಇನ್ನು ಆಡಳಿತ ರೂಢಪಕ್ಷ ಜನರನ್ನು ವಿಭಜಿಸುತ್ತಿದೆ ಆದರೆ ಕಾಂಗ್ರೆಸ್ ಪಕ್ಷ ಎಲ್ಲರನ್ನು ಒಗ್ಗೂಡಿಸುತ್ತಿದೆ. ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಲಿದ್ದಾರೆ. ಕರ್ನಾಟಕದಲ್ಲಿ ಸುಮಾರು 21 ದಿನಗಳ ಕಾಲ ಪಾದಯಾತ್ರೆ ಮಾಡಲಿದ್ದಾರೆ. ಕರ್ನಾಟಕದಲ್ಲಿ ಕೂಡ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ 'ಭಾರತ್ ಜೋಡೋ' ಕಾರ್ಯಕ್ರಮ ಯಶಸ್ಸಿಗೊಳಿಸುವ ಕಾರ್ಯ ಮಾಡಲಿದ್ದೇವೆ ಎಂದು ಹೇಳಿದ್ದಾರೆ.