ಕಾಸರಗೋಡು, ಸೆ 13 (DaijiworldNews/MS): ವಿದೇಶದಿಂದ ಹೊಸ ತಂತ್ರಗಾರಿಕೆ ಮೂಲಕ ಅಕ್ರಮ ಚಿನ್ನ ಕಳ್ಳಸಾಗಾಟ ಮಾಡಲಾಗುತ್ತಿದ್ದು ಪೆನ್ಸಿಲ್ ಶರ್ಪ್ನರ್ ಹಾಗೂ ಟೈಗರ್ ಬಾಮ್ ನೊಳಗೆ ಬಚ್ಚಿಟ್ಟು ಚಿನ್ನ ಸಾಗಾಟ ಮಾಡಿದ ಕಾಸರಗೋಡು ನಿವಾಸಿಯೋರ್ವನನ್ನು ಕೋಜಿಕ್ಕೋಡ್ ಕರಿಪ್ಪೂರು ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ. ಈತನಿಂದ 769 ಗ್ರಾಂ ಚಿನ್ನಾಭರಣವನ್ನು ವಶಪಡಿಸಕೊಳ್ಳಲಾಗಿದೆ.
ಕಾಸರಗೋಡಿನ ಮುಹಮ್ಮದ್ ಶಬೀರ್ ( 28) ಬಂಧಿತ ಆರೋಪಿ. ದುಬಾಯಿ ನಿಂದ ಈತ ಆಗಮಿಸಿದ್ದು , ಈತ ಚಿನ್ನವನ್ನು ಕಟ್ಟರ್ ಬ್ಲೇಡ್ ಆಗಿ ಪರಿವರ್ತಿಸಿ ಈತ ಸಾಗಾಟ ಮಾಡುತ್ತಿದ್ದನು.ಇದಲ್ಲದೆ ಟೈಗರ್ ಬಾಮ್ ನೊಳಗೆ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದನು .
ತಪಾಸಣೆ ತೀವ್ರಗೊಳಿಸಿದ ಹಿನ್ನಲೆಯಲ್ಲಿ ಹಲವು ರೀತಿಯಲ್ಲಿ ಚಿನ್ನ ಸಾಗಾಟ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದೆ. ಮುಹಮ್ಮದ್ ಶಬೀರ್ ವಿನೂತನ ಶೈಲಿಯಲ್ಲಿ ಚಿನ್ನ ಸಾಗಾಟ ಮಾಡಿದ್ದನು. ಕಟ್ಟರ್ ನ ಬ್ಲೇಡ್ ನ್ನು ಚಿನ್ನದಿಂದ ತಯಾರಿಸಿ ಇಂತಹ ತಂತ್ರಗಾರಿಕೆ ನಡೆಸಿದ್ದನು. ಸಂಶಯ ಬಾರದಂತೆ ಈತ ಸಾಗಾಟ ಮಾಡಿದ್ದು , 16 ಕಟ್ಟರ್ ಗಳ ಬ್ಲೇಡ್ ಗಳು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ಮಹಿಳೆಯರ ಹ್ಯಾಂಡ್ ಬ್ಯಾಗ್ , ಕುಕ್ಕಿಂಗ್ ಪಾತ್ರೆಯೊಳಗಡೆ ಹಾಗೂ ಟೈಗರ್ ಬಾಮ್ ನ ಮುಚ್ಚಳ ದಲ್ಲಿ ಸುಲಭವಾಗಿ ಗಮನಕ್ಕೆ ಬರದಂತೆ ಚಿನ್ನದಿಂದ ಲೇಪನ ಮಾಡಿ ತಂದಿದ್ದನು .
ಕಳೆದ ಎಂಟು ತಿಂಗಳ ಅವಧಿಯಲ್ಲಿ ಕರಿಪ್ಪೂರು ವಿಮಾನ ನಿಲ್ದಾಣ ಮೂಲಕ 105 ಕೋಟಿ ರೂ . ಮೌಲ್ಯದ ಚಿನ್ನಾಭರಣ ವನ್ನು ವಶಪಡಿಸಿಕೊಳ್ಳಲಾಗಿದೆ.