ಬಂಟ್ವಾಳ, ಸೆ 13 (DaijiworldNews/HR): ತಾಲೂಕಿನ ವಿಟ್ಲ ಸಮೀಪದ ಮಿತ್ತೂರಿನ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತನ್ನ ಜಮೀನಿನಲ್ಲಿ ಬೆಳೆದ ಅಡಕೆ ಮಾರಾಟದಿಂದ ಬಂದ ಆದಾಯದಿಂದ ಶಾಲಾ ಬಸ್ ಖರೀದಿಸಿದೆ.
112 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಗೆ ನಾಲ್ಕು ಎಕರೆ ಜಮೀನಿದೆ. 2017ರಲ್ಲಿ ಎಸ್ ಡಿಎಂಸಿ, ಶಿಕ್ಷಕರು ಹಾಗೂ ಗ್ರಾಮಸ್ಥರು ಸೇರಿ 628 ಅಡಿಕೆ ಸಸಿಗಳನ್ನು ನೆಟ್ಟಿದ್ದರು. ಈಗ ಇಳುವರಿ ಪಡೆಯುತ್ತಿದ್ದಾರೆ. ಶಾಲೆಯ ಹೊಲವನ್ನು ಹೊರಗುತ್ತಿಗೆ ನೀಡಲಾಗಿದೆ. ಶಾಲೆಗೆ ವಾರ್ಷಿಕ 2.50 ಲಕ್ಷ ಆದಾಯ ಬರುತ್ತದೆ.
ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ಶಾಲೆಗೆ 26 ಆಸನಗಳ ಬಸ್ ಖರೀದಿಸಲಾಗಿದೆ. ಬಸ್ನ ನಿರ್ವಹಣೆಯನ್ನು ಅಡಿಕೆ ತೋಟದ ಆದಾಯದಿಂದಲೇ ಎಸ್ಡಿಎಂಸಿ ನಿರ್ವಹಿಸುತ್ತದೆ.
ಶಾಸಕ ಸಂಜೀವ ಮಠಂದೂರು ಇತ್ತೀಚೆಗೆ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಗ್ರಾಮಸ್ಥರು, ಶಾಲಾ ಶಿಕ್ಷಕರು ಹಾಗೂ ಎಸ್ಡಿಎಂಸಿಯವರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.