ಕುಂದಾಪುರ, ಸೆ 12 (DaijiworldNews/MS): ಇಂದಿನ ಯುವ ಜನಾಂಗ ಮೊಬೈಲನ್ನು ಅವಲಂಭಿಸುತ್ತಿರುವುದು ಆತಂಕಕಾರಿಯಾಗಿದೆ. ಯುವಕರು ಮೊಬೈಲ್ ನಲ್ಲಿ ಪಬ್ಜ್ ಅಡುವುದನ್ನು ನಿಲ್ಲಿಸಿ. ಸೈನ್ಯಕ್ಕೆ ಸೇರಿ ರಿಯಲ್ಲಾಗಿ ಪಬ್ಜಿ ಆಡಬಹುದು ಎಂದು ಮಾಜಿ ಸೈನಿಕ ಸತ್ಯನಾರಾಯಣ ಯುವಕರಿಗೆ ಕಿವಿ ಮಾತು ಹೇಳಿದರು.
ಭಾರತೀಯ ಸೇನೆಯ ಸಿ.ಆರ್.ಪಿ.ಎಫ್ ನಲ್ಲಿ 20ವರ್ಷದ ಸೇವಾವಧಿ ಮುಗಿಸಿ ತವರಿಗೆ ಆಗಮಿಸಿದ ಬಸ್ರೂರಿನ ಹೆಮ್ಮೆಯ ಯೋಧನಿಗೆ ನಮ್ಮ ಯೋಧ ನಮ್ಮ ಹೆಮ್ಮೆ ತಂಡ ಹಾಗೂ ಬಸ್ರೂರಿನ ಗ್ರಾಮಸ್ಥರಿಂದ ಅದ್ಧೂರಿಯ ಸ್ವಾಗತ ನೀಡಲಾಯಿತು.
ಭಾನುವಾರ ಸಂಜೆ ವಾಪಾಸ್ಸಾದ ಯೋಧ ಸತ್ಯನಾರಾಯಣ ಅವರನ್ನು ಕುಂದಾಪುರ ಶಾಸ್ತ್ರೀ ವೃತ್ತದಿಂದ ತೆರೆದ ವಾಹನದಲ್ಲಿ ಕುಂದಾಪುರ ಮುಖ್ಯಪೇಟೆಯ ಮೂಲಕ ಬಸ್ರೂರಿನಲ್ಲಿ ಸಿದ್ಧಗೊಂಡಿದ್ದ ವೀರ ಸಾವರ್ಕರ್ ವೇದಿಕೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಬಳಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಸತ್ಯನಾರಾಯಣ ಅವರನ್ನು ಸನ್ಮಾನಿಸಿದರು. ಅಧ್ಯಕ್ಷತೆ ವಹಿಸಿದ್ದರು. ಶ್ರೀಕಾಂತ್ ಶೆಟ್ಟಿ ಕಾರ್ಕಳ ದಿಕ್ಸೂಚಿ ಭಾಷಣ ಮಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಸವರಾಜ್, ಮಾಜೀ ಸೈನಿಕ ಮಹಾಬಲ ಎನ್., ಬಸ್ರೂರು ಪೊಲೀಸ್ ಠಾಣಾಧಿಕಾರಿ ಪವನ್ ನಾಯಕ್, ಬಸ್ರೂರು ವ್ಯ.ಸೇ.ಸ.ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ, ಗ್ರಾಮ ಪಂಚಾಯತ್ ಪಿಡಿಒ ನಾಗೇಂದ್ರ ಜೆ., ಗಣಪತಿ ಖಾರ್ವಿ ಉಪಸ್ಥಿತರಿದ್ದರು. ಅಶೋಕ್ ಕೆರೆಕಟ್ಟೆ ಪ್ರಾಸ್ತಾವಿಸಿದರು.