ಮಂಗಳೂರು, ಸೆ 12 (DaijiworldNews/MS): ಕುಷ್ಠ ಹಾಗೂ ಎಚ್ ಐವಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ರಾಜೇಶ್ವರಿ (36) ಸೆ.8ರ ಸಂಜೆಯಿಂದ ನಾಪತ್ತೆಯಾಗಿದ್ದಾರೆ.
ಈ ಸಂಬಂಧ ನಾಪತ್ತೆಯಾದ ಮಹಿಳೆಯ ಪತಿ ದೂರು ದಾಖಲಿಸಿದ್ದಾರೆ.ರಾಜೇಶ್ವರಿ ಅವರು ಸೆ.8ರ ಸಂಜೆ 7.30ರ ಸುಮಾರಿಗೆ ಪತಿಯೊಂದಿಗೆ ಸ್ಟೇಟ್ ಬ್ಯಾಂಕ್ ಗೆ ಮೀನು ಮಾರುಕಟ್ಟೆಗೆ ಬಂದಿದ್ದರು ಈ ವೇಳೆ ಮಕ್ಕಳಿಗೆ ತಿಂಡಿ ತರಲೆಂದು ಹೋದವರು ವಾಪಸ್ ಬಂದಿಲ್ಲ. ಮೊಬೈಲ್ ಬ್ಯಾಗ್ ನಲ್ಲಿಟ್ಟು ಬಿಟ್ಟು ಹೋಗಿದ್ದಾರೆ. .
ರಾಜೇಶ್ವರಿ ಐದು ಅಡಿ ಎತ್ತರ, ಬಿಳಿ ಮೈಬಣ್ಣ, ಕನ್ನಡ, ತುಳು, ಮಲಯಾಳಂ ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ. ಅವಳು ಗುಲಾಬಿ ಬಣ್ಣದ ಚೂಡಿದಾರ್, ಲೆಗ್ಗಿಂಗ್ಸ್ ಮತ್ತು ಹಳದಿ ಬಣ್ಣದ ಶಾಲು ಧರಿಸಿದ್ದರು.
ರಾಜೇಶ್ವರಿ ಅವರ ಬಗ್ಗೆ ಮಾಹಿತಿ ಇದ್ದವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯನ್ನು 0824-220518 ಗೆ ಸಂಪರ್ಕಿಸಲು ಕೋರಲಾಗಿದೆ.